Advertisement

ಮಂಗಳೂರು ವಿಮಾನ ನಿಲ್ದಾಣ: ಹೆಸರಿನ ಪ್ರಸ್ತಾವವೇ ಹೋಗಿಲ್ಲ

11:41 PM Jan 04, 2023 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿಗೆ ಒಪ್ಪುವಂತಹ ಹೆಸರಿಡಬೇಕೆಂಬ ಹೋರಾಟಕ್ಕೆ ಹಲವು ವರ್ಷಗಳಾದರೂ ರಾಜ್ಯ ಸರಕಾರ ಇನ್ನೂ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಲ್ಲ.

Advertisement

ವಿಶೇಷವೆಂದರೆ ಜಿಲ್ಲಾಡಳಿತದಿಂದಲೂ ಅಧಿಕೃತ ಶಿಫಾ ರಸು  ಹೋಗಿಲ್ಲ. ವೀರರಾಣಿ ಅಬ್ಬಕ್ಕ, ಯು. ಶ್ರೀನಿ ವಾಸ ಮಲ್ಯ, ಕೋಟಿ ಚೆನ್ನಯ, ಬ್ರಹ್ಮಶ್ರೀ ನಾರಾ ಯಣ ಗುರು, ಕಮಲಾದೇವಿ ಚಟ್ಟೋಪಾಧ್ಯಾಯ  ಮುಂತಾದಹೆಸರುಗಳನ್ನು ಸಂಘ ಟನೆಗಳು ಪ್ರಸ್ತಾವಿಸಿವೆ. 2020ರ ನವೆಂಬರ್‌ನಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪೆನಿ ವಹಿಸಿಕೊಂಡ ಬಳಿಕ  ಅದಾನಿ ಏರ್‌ಪೋರ್ಟ್‌ ಎಂದು ಹೆಸರಿಸಲಾಗಿತ್ತು. ಜನರ ವಿರೋಧ ಬಂದ ಹಿನ್ನೆಲೆಯಲ್ಲಿ ಹಳೆಯ ಹೆಸರೇ ಉಳಿಯಿತು.

ಕೋಟಿ ಚೆನ್ನಯರ ಹೆಸರಿಡಲು ನಿಲ್ದಾಣ ವ್ಯಾಪ್ತಿಯ  ಮಳವೂರು ಗ್ರಾ.ಪಂ. 2016ರಲ್ಲೇ ನಿರ್ಣಯ ಕೈಗೊಂಡಿತ್ತು.

ಈ ಬಗ್ಗೆ ವಿಧಾನಸಭೆಯಲ್ಲಿ  ಶಾಸಕ ಉಮಾನಾಥ ಕೋಟ್ಯಾನ್‌ ಹಾಗೂ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಪ್ರಸ್ತಾವಿಸಿದ್ದರು. ಆದರೂ ಪ್ರಯೋಜನವಾಗಿಲ್ಲ.

2020ರಲ್ಲಿ ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ  ವಿಮಾನ ನಿಲ್ದಾಣಗಳಿಗೆ ಮರುನಾಮಕರಣ ಮಾಡುವ ಪ್ರಸ್ತಾವ ರಾಜ್ಯ ಸರಕಾರದ ಮುಂದಿತ್ತು. ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಅನೇಕರು ಪತ್ರಗಳನ್ನು ಬರೆದಿದ್ದರೂ ಪ್ರಸ್ತಾವದ ರೂಪದಲ್ಲಿ ಸರಕಾರಕ್ಕೆ ಹೋಗಿಲ್ಲ. 2014ರಲ್ಲಿ ಸಚಿವರಾಗಿದ್ದ ಯು. ಟಿ. ಖಾದರ್‌ ಕೂಡ ರಾಣಿ ಅಬ್ಬಕ್ಕನ ಹೆಸರು ಇಡುವುದಾಗಿ ಹೇಳಿದ್ದರು.

ಯಾವ ಕಾರಣಕ್ಕೆ ಹಿಂದಿನ ಹೆಸರು ಬದಲಿಸಬೇಕು ಹಾಗೂ ನಿರ್ದಿಷ್ಟ ಹೊಸ ಹೆಸರು ಇಡಬೇಕು ಎನ್ನುವುದನ್ನು ಆಸಕ್ತ ಪ್ರಾಯೋಜಕರು, ಸಂಘಟಕರು ಪತ್ರದ ಮೂಲಕ ವಿಮಾನ ನಿಲ್ದಾಣದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಅವರು ಅದನ್ನು ರಾಜ್ಯ ಸರಕಾರಕ್ಕೆ, ಅಲ್ಲಿಂದ ಶಿಫಾರಸು ರೂಪದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುವುದು. ಈ ಶಿಫಾರಸುಗಳನ್ನು ಸಚಿವಾಲಯ ಪರಿಶೀಲಿಸಿ ನಿರ್ಧರಿಸುತ್ತದೆ. ಕೆಲವೊಮ್ಮೆ ಕೇಂದ್ರ ಸರಕಾರವೇ ಸ್ವಯಂಪ್ರೇರಣೆಯಿಂದ ನಾಮಕರಣ ಮಾಡಲೂಬಹುದು. ಕೇಂದ್ರ ಸರಕಾರವು ಅಂಗೀಕರಿಸುವ ಹೆಸರನ್ನು ವಿಮಾನ  ನಿಲ್ದಾಣಕ್ಕೆ ಇಡಲಾಗುತ್ತದೆ.

ಹಲವು ಸಂಘ-ಸಂಸ್ಥೆ ಗಳಿಂದ ಮನವಿಗಳು ಬರುತ್ತಿವೆ. ಈವರೆಗೆ ಸಂಪುಟ ಸಭೆಯಲ್ಲಿ ನಿರ್ಣಯವಾಗಿಲ್ಲ, ಪ್ರಸ್ತಾವನೆಯನ್ನೂ ಕಳುಹಿಸಿಲ್ಲ. ವಿ. ಸುನಿಲ್‌ ಕುಮಾರ್‌, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next