Advertisement

ಅಮೆರಿಕದಲ್ಲಿ ಮಂಗಳೂರು ಮೂಲದ ಮಹಿಳೆ, ಪತಿ ಹತ್ಯೆ

03:45 AM May 07, 2017 | Team Udayavani |

ವಾಷಿಂಗ್ಟನ್‌/ಮಂಗಳೂರು: ಬಜಪೆ ಮೂಲದ ಮಹಿಳೆ ಮತ್ತು ಆಕೆಯ ಪತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ  ಈ ದಂಪತಿಯ ಪುತ್ರಿಯ ಮಾಜಿ ಪ್ರೇಮಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮೇ 3ರಂದು ನಡೆದಿದೆ. ಹಂತಕ ಬಳಿಕ ಅಮೆರಿಕದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

Advertisement

ಬಜಪೆ ಮೂಲದ ಮಹಿಳೆ ರಿಯಾನಾ (48) ಮತ್ತು ಆಕೆಯ ಪತಿ ಮುಂಬಯಿ ಮೂಲದ ನರೇನ್‌ ಪ್ರಭು (50) ಹಂತಕನ ಗುಂಡೇಟಿಗೆ ಬಲಿಯಾದವರು. ಅಮೆರಿಕದ ಮಿಝಾì ಟಟಿಕ್‌ (24) ಪೊಲೀಸರಿಂದ ಹತನಾದ ಹಂತಕ. ಹಂತಕ ಮಿಝಾì ಟಟಿಕ್‌ ದಂಪತಿಯ ಪುತ್ರಿ ರ್ಯಾಶೆಲ್‌ನ ಮಾಜಿ ಪ್ರಿಯಕರ. ನರೇನ್‌- ರಿಯಾನಾ ದಂಪತಿಯ ಸಾನ್‌ ಜೋಸ್‌ನಲ್ಲಿರುವ ಲಾರಾ ವಿಲ್‌ ಲೇನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ಪ್ರೀತಿ ನಿರಾಕರಣೆ: ರ್ಯಾಶೆಲ್‌ ಅವರು ಈ ಹಿಂದೆ ಮಿಝಾìನನ್ನು ಪ್ರೀತಿಸುತ್ತಿದ್ದಳು. ಆದರೆ ಆತನ ನಡತೆ ಸರಿ ಇಲ್ಲ ಎಂಬ ಕಾರಣಕ್ಕಾಗಿ ಒಂದು ವರ್ಷದ ಹಿಂದೆ ಆಕೆ ಆತನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ ಆತ ಆಕೆಯನ್ನು ಪ್ರೀತಿಸುವಂತೆ ಬಲವಂತಪಡಿಸುತ್ತಿದ್ದ. ಆಕೆ ಇನ್ನೂ ವ್ಯಾಸಂಗ ಮಾಡುತ್ತಿದ್ದು, ಆತನ ಕಿರುಕುಳ ಜಾಸ್ತಿಯಾದಾಗ ಹೆತ್ತವರು ಆಕೆಯನ್ನು ಮನೆಯಿಂದ ದೂರ ಕಳುಹಿಸಿ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ ಕಲಿಕೆಗೆ ಅನುವು ಮಾಡಿ ಕೊಟ್ಟಿದ್ದರು. ಬೇಸತ್ತ ಮಿಝಾì ಮನೆಮಂದಿಯ ಮೇಲೆ ಆಕ್ರೋಶ ಹೊಂದಿದ್ದು, ಬೆದರಿಕೆ ಹಾಕುತ್ತಿದ್ದನು. ಆತ ಪುತ್ರಿಗೆ ಕಿರುಕುಳ ನೀಡದಂತೆ ದಂಪತಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಇದರಿಂದ ತೀವ್ರ ಆಕ್ರೋಶಿತನಾದ ಮಿಝಾì ಮೇ 3ರಂದು ರಾತ್ರಿ ದಂಪತಿಯ ಮನೆಗೆ ತೆರಳಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಒತ್ತೆಯಾಳು ಬಿಡುಗಡೆ: ಬುಧವಾರ ರಾತ್ರಿ ದಂಪತಿಯ ಮನೆಯಲ್ಲಿದ್ದ ಪುತ್ರ ಪೊಲೀಸರಿಗೆ ಫೋನ್‌ ಮಾಡಿ ತನ್ನ ಹೆತ್ತವರನ್ನು ಶಂಕಿತ ವ್ಯಕ್ತಿಯೊಬ್ಬ ಕೊಲೆ ಮಾಡಿರುವುದಾಗಿ ತಿಳಿಸಿದ್ದರು. ಪೊಲೀಸರು ಆಗಮಿಸಿದಾಗ ನರೇನ್‌ ಪ್ರಭು ಮನೆಯ ಬಾಗಿಲ ಬಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ತನ್ನ ತಾಯಿ ಮತ್ತು 13 ವರ್ಷದ ಇನ್ನೋರ್ವ ಪುತ್ರ ಹಾಗೂ ಶಂಕಿತ ವ್ಯಕ್ತಿ ಮನೆಯ ಇನ್ನೊಂದು ಕೊಠಡಿಯಲ್ಲಿ ಇರುವುದಾಗಿ ತಿಳಿಸಿದ್ದ. ಬಳಿಕ ಮಿಝಾì ಮತ್ತು ಪೊಲೀಸ್‌ ಮಧ್ಯೆ ಸಂಧಾನ ಯತ್ನ ನಡೆಯಿತು. ಈ ನಡುವೆ ಪೊಲೀಸರು ಹೆಚ್ಚುವರಿ ಪಡೆಯನ್ನು ಕರೆಸಿದರು. ಆಗ ಆರೋಪಿ ಮಿಝಾì ಕೊಠಡಿಯಲ್ಲಿ ಒತ್ತೆಯಾಳಾಗಿ ಕೂಡಿ ಹಾಕಿದ್ದ 13 ವರ್ಷದ ಮಗನನ್ನು ಬಿಡುಗಡೆ ಮಾಡಿದ. ಆರೋಪಿ ಮಿಝಾì 13 ವರ್ಷದ ಮಗನ ಫೋನ್‌ ಉಪಯೋಗಿಸಿ ತನ್ನ ಮಾಜಿ ಪ್ರೇಯಸಿ ರ್ಯಾಶೆಲ್‌ಗೆ ಕರೆ ಮಾಡಿ ಮಾತನಾಡಲು ಯತ್ನಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next