Advertisement
ಸೆನ್ ಪೊಲೀಸ್ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ 72 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 196 ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ 9.83 ಕೋ.ರೂ. ವಂಚನೆ ನಡೆದಿದ್ದು ಅದರಲ್ಲಿ 1.17 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿತ್ತು. 2024ರಲ್ಲಿ ಹೂಡಿಕೆ ಹೆಸರಿನ ವಂಚನೆಗೆ ಸಂಬಂಧಿಸಿದ 67 ಪ್ರಕರಣಗಳಲ್ಲಿ 30,36,61,299 ರೂ., ಫೆಡೆಕ್ಸ್, ಡಿಜಿಟಲ್ ಅರೆಸ್ಟ್, ಕೊರಿಯರ್ ಮತ್ತು ಕಸ್ಟಮ್ಸ್ ಹೆಸರಿನ 25 ಪ್ರಕರಣಗಳಲ್ಲಿ 7,07,99,645 ರೂ.ಗಳನ್ನು ವಂಚಿಸಲಾಗಿದೆ.
ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರ್ಷ ಒಟ್ಟು 42 ಆರೋಪಿಗಳನ್ನು ಬಂಧಿಸಲಾಗಿದ್ದು ಇದರಲ್ಲಿ ಕರ್ನಾಟಕದ 15 ಮಂದಿ, ಒಡಿಸ್ಸಾ, ಮಹಾರಾಷ್ಟ್ರ, ರಾಜಸ್ತಾನ, ಹೊಸದಿಲ್ಲಿ ಮತ್ತು ಜಮ್ಮು ಕಾಶ್ಮೀರದ ತಲಾ ಒಬ್ಬರು, ಆಂಧ್ರಪ್ರದೇಶದ ಇಬ್ಬರು, ತಮಿಳುನಾಡಿನ 9 ಮಂದಿ, ಕೇರಳದ 11 ಮಂದಿ ಸೇರಿದ್ದಾರೆ.
Related Articles
ನ್ಯಾಷನಲ್ ಪೋರ್ಟಲ್ನಲ್ಲಿ ದಾಖಲಾದ 5,498 ದೂರುಗಳ ಪೈಕಿ 215ರಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 4,907 ಪ್ರಕರಣಗಳನ್ನು ಮುಕ್ತಾಯ ಗೊಳಿಸಲಾಗಿದ್ದು 591 ಪ್ರಕರಣ ಬಾಕಿ ಇದೆ. ಮಹಿಳೆಯರಿಗೆ ಸಂಬಂಧಿಸಿ 10 ಮತ್ತು ಮಕ್ಕಳಿಗೆ ಸಂಬಂಧಿಸಿ 8 ಸೈಬರ್ ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
Advertisement
ಜಾಗೃತಿ ಕಾರ್ಯಕ್ರಮಕಮಿಷನರೆಟ್ ವ್ಯಾಪ್ತಿಯ ಶಾಲೆ, ಕಾಲೇಜು, ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು ಮೊದಲಾದೆಡೆ ಒಟ್ಟು 217 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. 2.55 ಕೋ.ರೂ. ವಾಪಸ್; 9.32 ಕೋಟಿಗೆ ತಡೆ
ಈ ವರ್ಷ ವಂಚಕರು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ 40,46,75,693 ರೂ.ಗಳ ಪೈಕಿ 9,32,54,814 ರೂ.ಗಳ ವರ್ಗಾವಣೆಯನ್ನು ಖಾತೆಯಲ್ಲಿ ತಡೆಹಿಡಿಯಲಾಗಿದೆ. 2,55,45,674 ರೂ.ಗಳನ್ನು ದೂರುದಾರರಿಗೆ ವಾಪಸ್ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.