ಮಂಗಳೂರು: ಹಿಟಾಚಿ ಯಂತ್ರ ಮಾರಾಟ ಮಾಡುವುದಾಗಿ ಹೇಳಿ 10 ಲ.ರೂ. ಮುಂಗಡ ಪಡೆದು ಗುತ್ತಿಗೆದಾರರೊಬ್ಬರಿಗೆ ವಂಚನೆ ಮಾಡಿದ ಪ್ರಕರಣದ ಆರೋಪಿ ಮಹಾರಾಷ್ಟ್ರ ಯೋಧಮಾಲ್ ರಾಡಿಘಾಂವ್ ನಿವಾಸಿ ಅಮೋಲ್ ಸರ್ಜೆರಾವ್ ಉರ್ಕುಡೆ (23) ಎಂಬಾತನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುತ್ತಿಗೆದಾರ ಎಂ.ಕುಮಾರೇಶ್ ಅವರು ತನ್ನ ಕೆಲಸಗಾರ ಕಿಶೋರ್ ಕುಮಾರ್ ಮುಖಾಂತರ ಮಹಾರಾಷ್ಟ್ರದ ಅಮರಾವತಿಯ ಅಮೋಲ್ ಸರ್ಜೆರಾವ್ ಉರ್ಕುಡೆ ಎಂಬಾತನಿಂದ ಹಿಟಾಚಿ ಯಂತ್ರ ಖರೀದಿ ಮಾಡಲು ಮಾತುಕತೆ ನಡೆಸಿದ್ದರು.
13 ಲ.ರೂ. ಗೆ ಖರೀದಿಗೆ ಒಪ್ಪಿಗೆಯಾಗಿತ್ತು. 10 ಲ.ರೂ.ಗಳನ್ನು ಆರೋಪಿಯ ಬ್ಯಾಂಕ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಹಿಟಾಚಿ ತರಲು ಕಿಶೋರ್ ಕುಮಾರ್ನನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು. ಕಿಶೋರ್ ಕುಮಾರ್ ಅಲ್ಲಿಗೆ ಹೋಗಿ ಆರೋಪಿಗೆ ಕರೆ ಮಾಡಿದಾಗ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಆರೋಪಿ ಹಿಟಾಚಿಯನ್ನು ಕೊಡದೆ, ಹಣವನ್ನು ವಾಪಸ್ ನೀಡದೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಮಾರ್ಗದರ್ಶನಲ್ಲಿ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ.