ಮಂಗಳೂರು: ಅದ್ಯಪಾಡಿ ಡ್ಯಾಂ ಸಮೀಪ ಫಲ್ಗುಣಿ ನದಿ ತೀರದಲ್ಲಿ ನಿಷೇಧಿತ ಮಾದಕ ವಸ್ತುವಾ¨ ಗಾಂಜಾ ಮಾರಾಟ ಮಾಡಲು ಬಂದಿದ್ದ ಆಂಧ್ರ ಪ್ರದೇಶ ಚಿತ್ತೂರಿನ ಸಾಹೀಲ್ (19) ಮತ್ತು ಮಂಗಳೂರು ಸೋಮೇಶ್ವರದ ಪಿ. ಮನ್ಸೂರ್ ನನ್ನು ಕಾವೂರು ಪೊಲೀಸರು ಮಂಗಳವಾರ ಬಂಧಿಸಿ 3 ಲ.ರೂ. ಮೌಲ್ಯದ 10.125 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
Advertisement
ನಗರ ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ಕಾವೂರು ಇನ್‌ಸ್ಪೆಕ್ಟರ್ ಗುರು ರಾಜ್, ಪಿಎಸ್‌ಐ ರಘು ನಾಯಕ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.