Advertisement

ಮನೇಕಾ, ವೀರೇಂದ್ರ ಸ್ಪೀಕರ್‌ ರೇಸ್‌ನಲ್ಲಿ?

11:19 PM Jun 03, 2019 | mahesh |

ಹೊಸದಿಲ್ಲಿ: ಸ್ಪೀಕರ್‌ ಹುದ್ದೆಗೆ ಹಲವು ಹಿರಿಯ ನಾಯಕರು ಕಣದಲ್ಲಿದ್ದು, ಮನೇಕಾ ಗಾಂಧಿ, ರಾಧಾ ಮೋಹನ ಸಿಂಗ್‌ ಹಾಗೂ ವೀರೇಂದ್ರ ಕುಮಾರ್‌ ಕೂಡ ಪ್ರಮುಖ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಜೂನ್‌ 19ರಂದು ಸ್ಪೀಕರ್‌ ಆಯ್ಕೆ ನಡೆಯಲಿದೆ. ಜೂವಲ್‌ ಓರಂ, ಎಸ್‌ ಎಸ್‌ ಅಹ್ಲುವಾಲಿಯಾ ಕೂಡ ಸಂಭಾವ್ಯ ಅಭ್ಯರ್ಥಿ ಗಳು ಎನ್ನಲಾಗಿದೆ. ಮೂಲಗಳ ಪ್ರಕಾರ ಮನೇಕಾರನ್ನು ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ರಾಧಾಮೋಹನ ಸಿಂಗ್‌ ಕೂಡ ಆರು ಬಾರಿ ಸಂಸದರಾಗಿದ್ದು, ಇವರೂ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಆದರೆ ಬಿಜೆಪಿಯ ಕೆಲವು ಮುಖಂಡರ ಪ್ರಕಾರ ದಕ್ಷಿಣ ಭಾರತದ ಸಂಸದರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next