Advertisement

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

11:03 AM Jun 07, 2024 | Team Udayavani |

ಮಂಡ್ಯ: ಶಾಲಾ ಕಾವಲುಗಾರರನ್ನು ಬೆದರಿಸಿ ಆವರಣದಲ್ಲಿ ಐದು ಗಂಧದ ಮರಗಳನ್ನು ಕಳವು ಮಾಡಿದ ಘಟನೆ ಜಿಲ್ಲೆಯ ಚಾಮುಂಡೇಶ್ವರಿ ನಗರದ 22 ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

Advertisement

ಶಾಲೆಯ ಆವರಣದಲ್ಲಿ ಗಂಧದ ಮರಗಳನ್ನು ಆಡಳಿತ ಮಂಡಳಿ ಬೆಳೆಸಿತ್ತು. ತಡರಾತ್ರಿ ಶಾಲೆಗೆ ಲಗ್ಗೆ ಇಟ್ಟ 5 ರಿಂದ 6 ಜನ ಕಳ್ಳರು ಶಾಲಾ ಕಾವಲುಗಾರರನ್ನು ಬೆದರಿಸಿ ಗಂಧದ ಮರಗಳನ್ನು ತುಂಡರಿಸಿ ಕದ್ದೊಯ್ದಿದ್ದಾರೆ.

ಸುಮಾರು 10 ವರ್ಷ ವಯಸ್ಸಿನ 5 ಮರಗಳ ಕಳವಿನ ಬಗ್ಗೆ ಮಂಡ್ಯದ ಪಶ್ಚಿಮ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next