Advertisement

ಮಂಡ್ಯ ತಾಲೂಕು ಕೋವಿಡ್ ಹಾಟ್‌ಸ್ಪಾಟ್‌

03:33 PM Apr 22, 2021 | Team Udayavani |

ಮಂಡ್ಯ: ಜಿಲ್ಲೆಯ ಮಂಡ್ಯ ತಾಲೂಕುಕೊರೊನಾ ಸೋಂಕಿನ ಹಾಟ್‌ಸ್ಪಾಟ್‌ ಆಗಿಬದಲಾಗುತ್ತಿದೆ. ಪ್ರತಿದಿನ ನೂರಕ್ಕೂ ಹೆಚ್ಚುಪ್ರಕರಣ ದಾಖಲಾಗುತ್ತಿರುವುದುಸಾರ್ವಜನಿಕರಿಗೆ ಆತಂಕ ತಂದೊಡ್ಡಿದೆ.ಕಳೆದ ಒಂದು ವಾರದಿಂದ50ಕ್ಕೂ ಹೆಚ್ಚು ಪ್ರಕರಣಗಳುಮಂಡ್ಯ ತಾಲೂಕಿನಲ್ಲೇದಾಖಲಾಗುತ್ತಿದ್ದು, ನಾಲ್ಕುದಿನಗಳಿಂದ ಅದರ ಸಂಖ್ಯೆನೂರರ ಗಡಿ ದಾಟಿದೆ.

Advertisement

ಏ.17ರಂದು97, 18ರಂದು 157, 19ರಂದು 100,20ರಂದು 169, ಬುಧವಾರ 235ಪ್ರಕರಣಗಳು ದಾಖಲಾಗಿವೆ.7,863 ಪ್ರಕರಣ ದಾಖಲು: ಜಿಲ್ಲೆಯಲ್ಲಿಬೇರೆ ತಾಲೂಕುಗಳಿಗೆ ಹೋಲಿಸಿದರೆ ಮಂಡ್ಯತಾಲೂಕಿನಲ್ಲೇ ಅತಿ ಹೆಚ್ಚು 7,863 ಪ್ರಕರಣದಾಖಲಾಗಿವೆ.

ಉಳಿದಂತೆ ಮದ್ದೂರು2,690, ಮಳವಳ್ಳಿ 2,121, ಪಾಂಡವಪುರ2,369, ಶ್ರೀರಂಗಪಟ್ಟಣ 2,283, ಕೆ.ಆರ್‌.ಪೇಟೆ 3077, ನಾಗಮಂಗಲ 2460ಪ್ರಕರಣಗಳು ದಾಖಲಾಗಿವೆ.915 ಸಕ್ರಿಯ ಪ್ರಕರಣ: ಜಲ್ಲೆಯ ಎಲ್ಲತಾಲೂಕುಗಳ ಪೈಕಿ ಮಂಡ್ಯ ತಾಲೂಕಿನಲ್ಲೇ915 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಅರ್ಧದಷ್ಟು. ಮದ್ದೂರು 276, ಮಳವಳ್ಳಿ176, ಪಾಂಡವಪುರ 166, ಶ್ರೀರಂಗಪಟ್ಟಣ170, ಕೆ.ಆರ್‌.ಪೇಟೆ 128, ನಾಗಮಂಗಲ284 ಸಕ್ರಿಯ ಪ್ರಕರಣಗಳಿವೆ.ನಗರದಲ್ಲಿ ನಿರ್ಲಕ್ಷ್ಯ ಹೆಚ್ಚಳ: ಮಂಡ್ಯನಗರದಲ್ಲೇ ಅತಿ ಹೆಚ್ಚು ಪ್ರಕರಣ ಕಂಡುಬರುತ್ತಿವೆ. ಮಾರುಕಟ್ಟೆ, ಶಾಪಿಂಗ್‌ ಮಾಲ್‌,ಅಂಗಡಿ, ಮೀನು ಮಾರುಕಟ್ಟೆ,ಮಾಂಸದಂಗಡಿ, ಹೋಟೆಲ್‌, ಮದ್ಯ ಮಳಿಗೆ,ಬಸ್‌ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರಮಾಯವಾಗಿದೆ.ಸಾರ್ವಜನಿಕರು ಒಬ್ಬರಿಗೊಬ್ಬರುಅಂಟಿಕೊಂಡೇ ನಿಂತಿರುತ್ತಾರೆ.

ಅದರಲ್ಲೂಕೆಲವರು ಮಾಸ್ಕ್ ಧರಿಸಿರುವುದಿಲ್ಲ. ಕೆಲವುವಾಹನ ಸವಾರರು ಕೂಡ ಮಾಸ್ಕ್ ಇಲ್ಲದೆವಾಹನ ಚಲಾಯಿಸುವ ದೃಶ್ಯಗಳುಸಾಮಾನ್ಯವಾಗಿವೆ. ಕೊರೊನಾ ಸೋಂಕಿನಬಗ್ಗೆ ಜಾಗ್ರತೆ ವಹಿಸದೆ ನಿರ್ಲಕ್ಷ್ಯವಹಿಸುತ್ತಿರುವುದು ಸೋಂಕು ಹೆಚ್ಚಳಕ್ಕೆಕಾರಣವಾಗಿದೆ.

Advertisement

ಜಾಗೃತಿಗೆ ಮುಂದಾದಡೀಸಿ, ಎಸ್ಪಿಮಂಡ್ಯ ತಾಲೂಕಿನಲ್ಲೇ ಪ್ರಕರಣಹೆಚ್ಚುತ್ತಿರುವುದರಿಂದ ಜಾಗೃತಿಮೂಡಿಸಲು ಖುದ್ದಾಗಿ ಜಿಲ್ಲಾ ಧಿಕಾರಿಎಸ್‌.ಅಶ್ವಥಿ, ಎಸ್ಪಿ ಡಾ.ಎಂ.ಅಶ್ವಿ‌ನಿಕೊರೊನಾ ನಿಯಂತ್ರಣ ಕುರಿತು ಹಾಗೂಕೊರೊನಾ ನಿಯಮಗಳನ್ನು ಪಾಲಿಸುವಂತೆಸಾರ್ವಜನಿಕರಿಗೆ ಜಾಗೃತಿ ಮೂಡಿಸಲುಮುಂದಾಗಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ನಗರದಲ್ಲಿ ಸಂಚರಿಸಿಮಾಸ್ಕ್, ಸಾಮಾಜಿಕ ಅಂತರಕಾಯ್ದುಕೊಳ್ಳುವಂತೆ ಜಾಗೃತಿ ಜತೆಗೆಮಾಸ್ಕ್ ಹಾಕದವರಿಗೆ ದಂಡ ಹಾಕಿದ್ದರು.ಬುಧವಾರ ಎಸ್ಪಿ ಡಾ.ಎಂ.ಅಶ್ವಿ‌ನಿ,ನಗರದಲ್ಲಿ ಸಂಚರಿಸಿ ಮಾಸ್ಕ್ಗಳನ್ನುವಿತರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅರಿವು ಮೂಡಿಸಿದರು.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next