ಮದ್ದೂರು: ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹಸೌಧದಲ್ಲಿ ಭಾನುವಾರ ಆಯೋಜಿಸಿದ್ದ 75ನೇಸ್ವಾತಂತ್ರೋÂತ್ಸವ ಕಾರ್ಯಕ್ರಮದ ವೇಳೆ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಧ್ವಜಾರೋಹಣನೆರವೇರಿಸಿದರು.
ಈ ವೇಳೆ ಮಾತನಾಡಿದ ಸಿ.ಎಂ.ಲಿಂಗಪ್ಪ, ಸದರಿನೆಲದಲ್ಲಿ ಯುವ ಜನತೆ ಸೇರಿದಂತೆ ಮುಂದಿನ ಪೀಳಿಗೆಗೆ ಅಗತ್ಯವಿರುವ ದೇಶಾಭಿಮಾನ, ಸ್ವಾತಂತ್ರÂಪ್ರೇಮ ಇಮ್ಮಡಿಗೊಳಿಸಲು ಅಗತ್ಯ ಸಿದ್ಧತೆಗಳನ್ನುಮಾಡಿಕೊಳ್ಳುವ ಜತೆಗೆ ಉಪಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕಿದ್ದು, ಕಾಮಗಾರಿಗಳ ಸಂಬಂಧ ತಮ್ಮ ಶಾಸಕರ ಅನುದಾನದಲ್ಲಿ 10 ಲಕ್ಷರೂ. ವಿಶೇಷ ಅನುದಾನ ಘೋಷಿಸಿದರು.
ಅವಧೂತ ವಿನಯ್ ಗುರೂಜೀ ಮಾತನಾಡಿ,ಶಿವಪುರ ಧ್ವಜ ಸತ್ಯಾಗ್ರಹ ಸೌಧವನ್ನು ವಿಶ್ವವೇನಿಬ್ಬೆರಗಾಗುವ ರೀತಿಯಲ್ಲಿ ಸತ್ಯಾಗ್ರಹ ಸೌಧ ಅಭಿವೃದ್ಧಿಕಾಣಬೇಕಿದ್ದು ಮೈಸೂರು, ಬೆಂಗಳೂರು ಹೆದ್ದಾರಿಬದಿಯ ಸೌಧದ ಉನ್ನತಿಗೆ ರಾಜ್ಯದಮುಖ್ಯಮಂತ್ರಿಗಳೊಡನೆ ಚರ್ಚಿಸಿ ಗಮನ ಸೆಳೆಯುವಕಾರ್ಯ ಮಾಡುವುದಾಗಿ ಹೇಳಿದರು.
ಅಭಿನಂದನೆ: ಪುಲ್ವಮಾ ದಾಳಿ ವೇಳೆ ವೀರಮರಣವನ್ನಪ್ಪಿದ ಮದ್ದೂರು ತಾಲೂಕುಭಾರತೀನಗರದ ಯೋಧ ಎಚ್.ಗುರು ಅವರಪೋಷಕರಿಗೆ ಅಭಿನಂದಿಸಿ 50 ಸಾವಿರ ರೂ. ನಗದನ್ನುವಿನಯ್ ಗುರೂಜೀ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಗೌರವಾಧ್ಯಕ್ಷ, ಹಿರಿಯಸ್ವಾತಂತ್ರÂ ಹೋರಾಟಗಾರ ಕೆ.ಟಿ.ಚಂದು, ಅಧ್ಯಕ್ಷ ಎಂ.ಸ್ವರೂಪ್‌ಚಂದ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ ಮಾತನಾಡಿದರು.ರೋಟರಿ ಸಂಸ್ಥೆ ಅಧ್ಯಕ್ಷ ಸಿ.ಪ್ರಕಾಶ್, ಲಯನ್ಸ್‌ಅಧ್ಯಕ್ಷ ಎಚ್.ಪ್ರಕಾಶ್, ಇನ್ನರ್‌ವ್ಹೀಲ್ ಅಧ್ಯಕ್ಷೆಸೌಮ್ಯ ಉಮೇಶ್, ಭಾವಿಪ ಬಿ.ಡಿ.ಹೊನ್ನೇಗೌಡ,ಸಂಸ್ಕೃತಿ ಲಯನ್ಸ್ ಅಧ್ಯಕ್ಷ ಪ್ರಭಾಕರ್,ಪದಾಧಿಕಾರಿಗಳಾದ ಲಕ್ಷ ¾ಣ್‌ಗೌಡ, ಚನ್ನಂಕೇಗೌಡ,ಅಪೂರ್ವಚಂದ್ರ, ರೋಹಿತ್, ಮಧುಕುಮಾರ್,ಪ್ರಾಂಶುಪಾಲ ಬಿ.ವಿ.ಎಸ್.ಶೆಂಡಿಗೆ, ಯು.ಎಸ್.ಶಿವಕುಮಾರ್ ಇತರರಿದ್ದರು.