ಮಂಡ್ಯ: ಕಾಡಾ ವತಿಯಿಂದ 8 ಜಿಲ್ಲೆಗಳಲ್ಲಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಎಂದುಕಾಡಾ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ, ಕೆಆರ್‌ಎಸ್‌ಯೋಜನೆ ಮಟ್ಟದ ನೀರು ಬಳಕೆದಾರರ ಸಹಕಾರಸಂಘಗಳ ಮಹಾಮಂಡಳ, ಮಲ್ಲನಾಯಕನಕಟ್ಟೆನೀರು ಬಳಕೆದಾರರ ಸಹಕಾರ ಸಂಘದಿಂದಏರ್ಪಡಿಸಿದ್ದ ವಾರ್ಷಿಕ ಕಾರ್ಯಾನುದಾನದಕಾಮಗಾರಿ ಪ್ರಾರಂಭ ಹಾಗೂ ವನಮಹೋತ್ಸವಕ್ಕೆಚಾಲನೆ ನೀಡಿ ಮಾತನಾಡಿದರು.
ಕಾರ್ಯಾನುದಾನದ ಅನುದಾನದಿಂದ ನಾಲೆ ಹೂಳೆತ್ತುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್‌ಮಾತನಾಡಿ, ಕೊರೊನಾ 1ನೇ ಅಲೆಯಲ್ಲಿಆಕ್ಸಿಜನ್ ಸಮಸ್ಯೆ ಇರಲಿಲ್ಲ. 2ನೇ ಅಲೆಯಲ್ಲಿಆಕ್ಸಿಜನ್‌ಗೆ ಹಾಹಾಕಾರ, ಬೆಡ್ ಸಮಸ್ಯೆ ವೆಂಟಿಲೇಟರ್ ಸಮಸ್ಯೆ ಎದುರಿಸಬೇಕಾಯಿತು ಎಂದುತಿಳಿಸಿದರು.
ಬಿಜೆಪಿ ಹಾಗೂ ಕಾಡಾ ವತಿಯಿಂದಗಿಡ ನೆಡುವ ಅಭಿಯಾನ ಪ್ರಾರಂಭಿಸಲಾಗಿದ್ದು,ಪ್ರತಿ ಗ್ರಾಮಗಳಲ್ಲಿ ಸಸಿ ನೆಡುವ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ನೀರು ಬಳಕೆದಾರರಸಹಕಾರ ಸಂಘಗಳ ಷೇರುದಾರರು ಸಸಿ ನೆಟ್ಟುಪೋಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕುಎಂದು ತಿಳಿಸಿದರು.ಕೆಆರ್‌ಎಸ್ ಯೋಜನೆ ಮಟ್ಟದ ನೀರುಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿಉಪಾಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಕಾಡ ಯೋಜನೆಗಳು ಅಚ್ಚುಕಟ್ಟುದಾರರುತಲುಪುವ ನಿಟ್ಟಿನಲ್ಲಿ ಕಾಡ ಅಧ್ಯಕ್ಷರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆಂದರು.
ಮುಂಗಾರುಪ್ರಾರಂಭ ಮುನ್ನವೇ ನಾಲೆ ಹೂಳೆತ್ತಿಸುವ ಕಾಮಗಾರಿ ಪ್ರಾರಂಭಿಸ ಬೇಕಾಗಿತ್ತು. ಆದರೆಸ ಕೊರೊನಾ2 ತಿಂಗಳಿಂದ ವಿಶ್ವವನ್ನು ತಲ್ಲಣಗೊಳಿಸಿರುವ ಈಸಂದರ್ಭದಲ್ಲಿ ಕಾಮಗಾರಿ ಮಾಡಲು ಆಗಿರಲಿಲ್ಲಎಂದರು. ಮಲ್ಲನಾಯಕನಕಟ್ಟೆನೀರುಬಳಕೆದಾರರಸಹಕಾರ ಸಂಘದ ಅಧ್ಯಕ್ಷ ಸಿದ್ದರಾಜು, ಡಿಸಿಸಿಬ್ಯಾಂಕ್ ಮಾಜಿ ನಿರ್ದೇಶಕ ಶಂಕರೇಗೌಡ, ಎಂಜಿನಿಯರ್‌ಕೆಂಪರಾಜು ಮತ್ತಿತರರಿದ್ದರು.