Advertisement
ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೊಂಡು ಐದು ವರ್ಷಗಳಾದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಜಿಲ್ಲೆಯ ಆರ್ಥಿಕ ಜೀವನಾಡಿ ಮೈಸೂರು ಸಕ್ಕರೆ ಕಾರ್ಖಾನೆ ಒಂದೂವರೆ ದಶಕದಿಂದ ರೋಗಗ್ರಸ್ಥ ಕಾರ್ಖಾನೆ ಹಣೆಪಟ್ಟಿಯಿಂದ ಹೊರಬಂದಿಲ್ಲ. ಮುಂಗಾರು ಕೈಕೊಟ್ಟಿರುವುದರಿಂದ ನೀರಿನ ಸಮಸ್ಯೆಗೆ ಜಿಲ್ಲೆಯ ಜನರಿಗೆ ಮುಕ್ತಿ ಸಿಗುತ್ತಿಲ್ಲ. ಬೆಂಗಳೂರಿನಿಂದ ಮಳವಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಸಮೀಕ್ಷೆ ಮುಗಿದರೂ ಹಲವು ವರ್ಷಗಳಿಂದ ಕಾಮಗಾರಿಗೆ ಚಾಲನೆಯೇ ದೊರಕಿಲ್ಲ.
Related Articles
Advertisement
ರೋಗಗ್ರಸ್ಥ ಕಾರ್ಖಾನೆಗಳ ಸುಧಾರಣೆ: ಕಳೆದ ಒಂದೂವರೆ ದಶಕದಿಂದ ಮೈಸೂರು ಸಕ್ಕರೆ ಕಾರ್ಖಾನೆ ರೋಗಗ್ರಸ್ಥವಾಗಿದ್ದರೂ ಸುಧಾರಣೆಯೇ ಕಾಣದಂತಾಗಿದೆ. ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ 400 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಂದಿದ್ದರೂ ಪ್ರಗತಿ ಮಾತ್ರ ಕಂಡಿಲ್ಲ. ರೋಗಗ್ರಸ್ಥ ಹಣೆಪಟ್ಟಿಯಿಂದಲೂ ಹೊರಬರುವ ಲಕ್ಷಣಗಳೇ ಕಾಣುತ್ತಿಲ್ಲ. ದುರಸ್ತಿ ನೆಪದಲ್ಲಿ ನೂರಾರು ಕೋಟಿ ರೂ.ಗಳನ್ನು ವ್ಯಯ ಮಾಡಿದ್ದರೂ ನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಕಾರ್ಖಾನೆ ಹೊಂದಿಲ್ಲ.
ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕ ಸ್ಥಾಪನೆಯಾಗಿ ಹತ್ತಾರು ವರ್ಷಗಳಾದರೂ ಇದುವರೆಗೂ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಕಾರ್ಖಾನೆಗೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಂಡು ಸ್ವಾವ ಲಂಬಿಯಾಗುವಲ್ಲೂ ಯಶಸ್ಸನ್ನು ಕಂಡಿಲ್ಲ. ಇಂದಿಗೂ ಕೆಪಿಟಿಸಿಎಲ್ ವಿದ್ಯುತ್‌ನಿಂದಲೇ ಕಾರ್ಖಾನೆ ಚಾಲನೆಯಾಗುತ್ತಿದೆ.
ರೋಗಗ್ರಸ್ಥ ಕಾರ್ಖಾನೆಯಾಗಿರುವ ಮೈಷುಗರ್ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ತರುವುದಕ್ಕೆ ಅವ ಕಾಶಗಳಿವೆ. ಅನುದಾನ ಸಿಗುವ ಅವಕಾಶಗಳ ಬಾಗಿಲನ್ನು ಮುಕ್ತ ಗೊಳಿಸಬೇಕಿದೆ. ಕಾರ್ಖಾನೆ ಉಳಿವಿನ ಅಗತ್ಯತೆ, ರೈತರ ಅವ ಲಂಬನೆ, ಕಬ್ಬು ಬೆಳೆ ಪ್ರದೇಶದ ವ್ಯಾಪ್ತಿ ಎಲ್ಲವನ್ನೂ ಕೇಂದ್ರದ ಗಮನಕ್ಕೆ ತಂದು ವಿಶೇಷ ಅನುದಾನ ತಂದು ಕಂಪನಿಯನ್ನು ಪ್ರಗತಿಯತ್ತ ಮುನ್ನಡೆಸಬಹುದು.
ಮೈಷುಗರ್ ಕಾಯಕಲ್ಪ ನೀಡಿ: ಬಿಜೆಪಿ ಬೆಂಬಲ ಪಡೆದು ಸಂಸದೆ ಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರದ ಗಮನ ಸೆಳೆದು ರೋಗಗ್ರಸ್ಥ ಕಾರ್ಖಾನೆಗೆ ಕಾಯಕಲ್ಪ ನೀಡಬೇಕಾದ ತುರ್ತು ಅಗತ್ಯವಿದೆ. ಕೇಂದ್ರದಿಂದ ಕಾರ್ಖಾನೆ ಪುನಶ್ಚೇತನಕ್ಕೆ ವಿಶೇಷ ಅನುದಾನವನ್ನು ತಂದು ಕಂಪನಿಗೆ ಹೊಸ ಚೈತನ್ಯ ನೀಡುವರು ಎಂಬ ನಿರೀಕ್ಷೆ ಜನರಲ್ಲಿ ಮನೆಮಾಡಿದೆ.