ಮಂಡ್ಯ: ಮಗವನ್ನು ಸಾಯಿಸಿ ದಂಪತಿಗಳಿಬ್ಬರು ನೇಣು ಬಿಗಿದು ಕೊಂಡು ಸಾವನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ
ಕೌಟುಂಬಿಕ ಕಲಹದಿಂದ ಬೆಸತ್ತು ಒಂದುವರೆ ವರ್ಷದ ಮಗು ಸೇರಿದಂತೆ ಪತಿ ಪತ್ನಿ ಇಬ್ಬರೂ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲ್ಲೂಕಿನ ಹೊಣಕೆರೆ ಹೊಬಳಿ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ನಗರ ಶುಗರ್ ಟೌನ್ ನಿವಾಸಿಯಾದ ರಘು(28) ಪತ್ನಿ ತನುಶ್ರೀ(24) ಹಾಗೂ ಒಂದೂವರೆ ವರ್ಷದ ಮಗು ಸಿರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾರೆ.
ಜೀವನದಲ್ಲಿ ಕೌಟುಂಬಿಕ ಕಲಹದಿಂದ ನೊಂದು ತನುಶ್ರೀ ತವರು ಮನೆಯಾದ ಗಂಗವಾಡಿಗೆ ವಾರದ ಹಿಂದೆ ಬಂದಿದ್ದರು ಎನ್ನಲಾಗಿದೆ.
Related Articles
ಮಂಗಳವಾರ ಸಂಜೆ 6.30ರಲ್ಲಿ ತಮ್ಮ ಮಗುವನ್ನ ಸಾಯಿಸಿ ತಾವುಗಳೂ ಮನೆಯಲ್ಲಿ ನೇಣುಬಿಗಿದುಕೊಂಡು ಸಾವು ತಂದುಕೊಂಡಿದ್ದಾರೆ.
ಘಟನೆ ಸಂಬಂಧ ಗ್ರಾಮಾಂತರ ಠಾಣಾ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ದಾವಣಗೆರೆ : ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 46 ಮಂದಿಯಲ್ಲಿ ಸೋಂಕು ದೃಢ