Advertisement

ಮನ್‌ಮುಲ್‌: ರಾಜಕೀಯ ಕೆಸರೆರಚಾಟ

07:48 PM Jul 01, 2021 | Team Udayavani |

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್‌)ದಲ್ಲಿನಡೆದಿರುವ ಹಾಲು-ನೀರು ಮಿಶ್ರಿತ ಹಗರಣವು ರಾಜಕೀಯವಾಗಿಬದಲಾಗಿದೆ.ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ರಾಜಕೀಯಮಾತಿನ ಸಮರಕ್ಕೆ ಬಳಸಿಕೊಂಡರೆ, ಬಿಜೆಪಿಯು ಮೌನವಾಗಿಯೇತನ್ನ ದಾಳ ಉರುಳಿಸಲು ಮುಂದಾಗಿದೆ.ಹಗರಣ ಬೆಳಕಿಗೆ ಬರುತ್ತಿದ್ದಂತೆ ಜೆಡಿಎಸ್‌ ನಾವೇ ಹಗರಣವನ್ನು ಹೊರಗೆತಂದಿದ್ದೇವೆ.

Advertisement

ರೈತರಿಗೆ, ಗ್ರಾಹಕರಿಗೆಅನ್ಯಾಯವಾಗಲು ಬಿಡುವುದಿಲ್ಲ.2014ರಿಂದಲೂಈ ದಂಧೆನಡೆಯುತ್ತಿತ್ತು.ಇದಕ್ಕೆ ಕಾಂಗ್ರೆಸ್‌ ಆಡಳಿತವೇ ಕಾರಣಎಂದು ಹೇಳಿತ್ತು. ಇದಕ್ಕೆ ಕಾಂಗ್ರೆಸ್‌ಹಗರಣದಲ್ಲಿ ಪ್ರಸ್ತುತ ಆಡಳಿತಮಂಡಳಿಯವರು, ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಭಾಗಿಯಾಗಿದ್ದಾರೆಎಂದುಆರೋಪಿಸಿತ್ತು.

ಇದರಿಂದ ಎರಡು ಪಕ್ಷಗಳ ರಾಜಕೀಯ ಮುಸುಕಿನ ಗುದ್ದಾಟನಡೆಯುತ್ತಾ ಬಂದಿತ್ತು.ಆಡಿಯೋ ವೈರಲ್‌ನಿಂದ ಮತ್ತಷ್ಟು ಸ್ಫೋಟ: ಈ ನಡುವೆ ಕಳೆದಮೂರು ದಿನಗಳ ಹಿಂದೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಮನ್‌ಮುಲ್‌ ಮಾಜಿ ನಿರ್ದೇಶಕ ತೂಬಿನಕೆರೆಜವರೇಗೌಡ ಅವರ ನಡುವೆ ನಡೆದಿದ್ದ ಸಂಭಾಷಣೆಯ ಆಡಿಯೋವೈರಲ್‌ನಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವಿನರಾಜಕೀಯ ಕೆಸರೆರಚಾಟ ಮತ್ತಷ್ಟು ಸ್ಫೋಟಗೊಂಡಿದೆ.

ಮನ್‌ಮುಲ್‌ನ್ನು ಕಾಂಗ್ರೆಸ್‌ ಸೂಪರ್‌ಸೀಡ್‌ ಮಾಡುವ ಪ್ರಯತ್ನಕ್ಕೆಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಡೆಯೊಡ್ಡಿರುವ ಬಗ್ಗೆಕಿಡಿಕಾರಿದ್ದರು. ಇದರಿಂದ ಸೂಪರ್‌ಸೀಡ್‌ ಮಾಡುವ ಮೂಲಕಜೆಡಿಎಸ್‌ ಆಡಳಿತಕ್ಕೆ ತಿಲಾಂಜಲಿ ಇಡುವ ಕಾಂಗ್ರೆಸ್‌ ತಂತ್ರಬಟಾಬಯಲಾಗಿದೆ.

ಚಲುವರಾಯಸ್ವಾಮಿ ವಿರುದ್ಧ ಕೆಂಡಾಮಂಡಲ: ಮಾಜಿ ಸಚಿವಎನ್‌.ಚಲುವರಾಯಸ್ವಾಮಿ ಆಡಿಯೋದಲ್ಲಿ ಮಾಜಿ ಪ್ರಧಾನಿಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ, ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಜಿಲ್ಲೆಯ ದಳಪತಿಗಳುಕಿಡಿಕಾರುತ್ತಿದ್ದಾರೆ.

Advertisement

ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ, ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ, ಮಳವಳ್ಳಿ ಶಾಸಕ ಕೆ.ಅನ್ನದಾನಿ, ಜಿಪಂಸದಸ್ಯ ಎಚ್‌.ಟಿ.ಮಂಜು, ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರ,ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷಡಿ.ರಮೇಶ್‌ ಸೇರಿದಂತೆ ಮತ್ತಿತರರು ಮಾತಿನ ಮೂಲಕವೇ ಸಮರಕ್ಕೆಇಳಿದಿದ್ದಾರೆ.

ಆದರೆಕಾಂಗ್ರೆಸ್‌ನಿಂದಚಲುವರಾಯಸ್ವಾಮಿಬಿಟ್ಟರೆ, ಬೇರೆ ನಾಯಕರು ಅವರ ಬೆಂಬಲಕ್ಕೆ ನಿಂತಿಲ್ಲ.ಸಿಆರ್‌ಎಸ್‌ ವಿರುದ್ಧ ಎಚ್‌ಡಿಕೆ ಕಿಡಿ: ಮಂಗಳವಾರಮಳವಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂಎಚ್‌.ಡಿ.ಕುಮಾರಸ್ವಾಮಿ ಚಲುವರಾಯಸ್ವಾಮಿ ವಿರುದ್ಧಏಕವಚನದಲ್ಲಿಯೇ ವಾಗ್ಧಾಳಿ ನಡೆಸಿದ್ದರು.

ಚಲುವರಾಯಸ್ವಾಮಿರಾಜಕೀಯ ಬೆಳವಣಿಗೆ ಎಲ್ಲಿಂದ ಆಯಿತು ಎಂಬುದನ್ನುಅರಿತುಕೊಂಡು ಮಾತನಾಡಲಿ. ಸೂಪರ್‌ಸೀಡ್‌ ಮಾಡುವುದಕ್ಕೆತಡೆಯೊಡ್ಡಿರುವುದು ನಿಜ. ಆದರೆ ತನಿಖೆಗೆ ಅಡ್ಡಿಪಡಿಸಿಲ್ಲ ಎಂದುಕಿಡಿಕಾರಿದ್ದಾರೆ.ಒಟ್ಟಾರೆ ಮನ್‌ಮುಲ್‌ ಹಗರಣದ ಬಗ್ಗೆ ಪಾರದರ್ಶಕವಾಗಿತನಿಖೆ ನಡೆದು ಜಿಲ್ಲೆಯ ರೈತರು, ಗ್ರಾಹಕರಿಗೆ ಹಾಗೂ ಹಾಲುಉತ್ಪಾದಕರಿಗೆ ನ್ಯಾಯ ಕೊಡಿಸಬೇಕಾದ ನಾಯಕರು,ಹಗರಣವನ್ನೇ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದು ಜಿಲ್ಲೆಯ ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.

ಎಚ್‌.ಶಿವರಾಜು

 

Advertisement

Udayavani is now on Telegram. Click here to join our channel and stay updated with the latest news.

Next