ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆರನೇ ವರ್ಷದ ಮಳೆಗಾಲದ ಯಕ್ಷಗಾನ ಸೇವೆ ಆಟಕ್ಕೆ ಚಾಲನೆ ದೊರೆಯಿತು.
ಬೆಳಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿ ಹೋಮ, ಶ್ರೀ ಕ್ಷೇತ್ರದಲ್ಲಿ ಎರಡು ಮೇಳಗಳ ಶ್ರೀ ಮಹಾಗಣಪತಿ ಪೂಜೆ, ರಾತ್ರಿ ಪ್ರಥಮ ದೇವರ ಸೇವೆ ಜರಗಿತು. ಅರ್ಚಕ ಎಚ್. ಶ್ರೀಪತಿ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ದೇವಸ್ಥಾನದ ಕಾರ್ಯನಿರ್ವ ಹಣಾಧಿ ಕಾರಿ ಎಸ್.ಸಿ. ಕೊಟಾರಗಸ್ತಿ, ಆನುವಂಶಿಕ ಮೊಕ್ತೇಸರರಾದ ಎಚ್. ಧನಂಜಯ ಶೆಟ್ಟಿ, ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.