Advertisement
ಮಂಗಳವಾರ ಜರಗಿದ ಸರಳ ಸಮಾರಂಭವನ್ನು ಮಂದಾರ್ತಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶೇಡಿಕೊಡ್ಲು ವಿಟuಲ ಶೆಟ್ಟಿ ಅವರು ಉದ್ಘಾಟಿಸಿ, ಈ ವಿಶಿಷ್ಟ ಸೇವಾ ಕಾರ್ಯಕ್ರಮ ಇತರರಿಗೆ ಪ್ರೇರಣೆಯಾಗಲಿ, ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಇಂದು ಆಚರಣೆಗಳು ಸಂಪತ್ತಿನ, ಪ್ರಭಾವದ ಪ್ರದರ್ಶನ ಆಗುತ್ತಿರುವ ಸಂದರ್ಭದಲ್ಲಿ ನಮ್ಮ ಷಷ್ಟ ಬ್ದಿ ಕಾರ್ಯಕ್ರಮ ಭಿನ್ನವಾಗಿರಬೇಕೆಂದು ಯೋಚಿಸಿದೆವು. ಸಮಾಜದಿಂದ ಪಡೆದುದಕ್ಕೆ ಕಿಂಚಿತ್ ಕೊಡುಗೆಯಾಗಿ ಹಸುಗಳನ್ನು ನೀಡುತ್ತಿದ್ದೇವೆ. ಜನ್ಮ ಕೊಟ್ಟ ತಾಯಿ, ಗೋಮಾತೆ ಹಾಗೂ ಭೂಮಾತೆಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಡಾ| ನಾಗಾನಂದ ಭಟ್ ಪ್ರಸ್ತಾವನೆಯಲ್ಲಿ ಹೇಳಿದರು. ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎಚ್. ಧನಂಜಯ ಶೆಟ್ಟಿ ಶುಭಹಾರೈಸಿದರು. ಅತಿಥಿಗಳಾಗಿ ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ| ಅನಿಲ ಕುಮಾರ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸುಧಾಕರ್, ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಡಾ| ಸುವರ್ಣಾ ಭಟ್, ಆಶ್ಲೇಷ ಭಟ್ ಅತಿಥಿಗಳನ್ನು ಗೌರವಿಸಿದರು. ಉದಯ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.