ಮ್ಯಾಂಚೆಸ್ಟರ್: ಇಲ್ಲಿ ಸೋಮವಾರ ಸಂಜೆ ನಡೆಯುತ್ತಿದ್ದ ಅಮೆರಿಕದ ಪ್ರಖ್ಯಾತ ಗಾಯಕ ಅರಿಯಾನಾ ಗ್ರಾಂಡೆ ಕಾರ್ಯಕ್ರಮವನ್ನು ಗುರಿಯಾಗಿರಿಸಿಕೊಂಡು ಉಗ್ರ ದಾಳಿ ನಡೆಸಲಾಗಿದ್ದು ಕನಿಷ್ಠ 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಸಂಗೀತಾಸಕ್ತರು ನೆರೆದಿದ್ದುದನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದ್ದು , ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು ಈ ವೇಳೆ ಹಲವರು ಸ್ಥಳದಲ್ಲೇ ಛಿದ್ರಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ತೆರೇಸಾ ಮೇ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು 2005 ಜುಲೈ ತಿಂಗಳಿನಲ್ಲಿ ಲಂಡನ್‌ನಲ್ಲಿ ನಾಲ್ವರು ಬ್ರಿಟಿಷ್‌ಮುಸ್ಲಿಮರು ನಡೆಸಿದ 52 ಜನರ ಹತ್ಯಾಕಾಂಡದ ಬಳಿಕ ನಡೆದ ಅತೀ ದೊಡ್ಡ ದಾಳಿ ಎಂದಿದ್ದಾರೆ.
ಇಂಗ್ಲೆಂಡ್‌ನಲ್ಲಿ ವ್ಯಾಪಕ ಕಟ್ಟೆಚ್ಚರದ ನಡೆವೆಯೂ ಭೀಕರದ ದಾಳಿ ನಡೆದಿರುವುದು ವಿಶ್ವವನ್ನು ಬೆಚ್ಚಿ ಬೀಳಿಸಿದೆ. ಗಾಯಳುಗಳ ಸಂಖ್ಯೆ ಹೆಚ್ಚಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.
ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.