Advertisement

ಮನಸ್ಮಿತ ಹಾಡು ಹಬ್ಬ: ಜೂನ್‌ನಲ್ಲಿ ತೆರೆಗೆ

01:49 PM May 18, 2022 | Team Udayavani |

ಮ್ಯೂಸಿಕಲ್‌ ರೊಮ್ಯಾಂಟಿಕ್‌ ಕಥಾಹಂದರ ಹೊಂದಿರುವ “ಮನಸ್ಮಿತ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರತಂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಚರಣ್‌ ಗೌಡ, ಸಂಜನಾ ದಾಸ್‌, ಅತುಲ್‌ ಕುಲಕರ್ಣಿ, ಪಲ್ಲವಿ ಪುರೋಹಿತ್‌, ಸುಚೇಂದ್ರ ಪ್ರಸಾದ್‌, ರಾಜೇಂದ್ರ ಕಾರಂತ್‌, ಮೂಗು ಸುರೇಶ್‌, ಕರಿಸುಬ್ಬು, ಶಿಲ್ಪಾ, ವೀಣಾ ಪೊನ್ನಪ್ಪ, ಸೌಭಾಗ್ಯ, ಪ್ರದೀಪ್‌ ಶಾಸ್ತ್ರೀ, ಪ್ರದೀಪ್‌ ಪೂಜಾರಿ ಮೊದಲಾದವರು “ಮನಸ್ಮಿತ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಅಪ್ಪಣ್ಣ ಸಂತೋಷ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

“ಎರಡು ಕಾಲಘಟ್ಟದಲ್ಲಿ ನಡೆಯುವ ವಿಭಿನ್ನ ಘಟನೆಗಳನ್ನು ಇಟ್ಟುಕೊಂಡು ಅದರ ಮೂಲಕ ಸಂಗೀತದ ವಿವಿಧ ಮಜಲುಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಲಾಗಿದೆ. ಇಡೀ ಸಿನಿಮಾ ನವಿರಾದ ಪ್ರೇಮಕಥೆಯ ಜೊತೆಗೆ ಸಂಗೀತಮಯವಾಗಿ ಸಾಗುತ್ತದೆ’ ಎಂಬುದು ಚಿತ್ರದ ವಿಶೇಷತೆಯ ಬಗ್ಗೆ ಚಿತ್ರತಂಡದ ಮಾತು.

ಇದನ್ನೂ ಓದಿ: ಮೇ 20 ರಿಂದ “ಪ್ರಾರಂಭ” ಶುಭಾರಂಭ

“ಸುಮಾರು ಮೂರು ವರ್ಷಗಳ ಹಿಂದೆಯೇ “ಮನಸ್ಮಿತ’ ಸಿನಿಮಾದ ಕೆಲಸಗಳು ಶುರುವಾಗಿದ್ದು, ಕೋವಿಡ್‌ ನಿಂದಾಗಿ ಅಂದುಕೊಂಡ ಸಮಯಕ್ಕೆ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಸದ್ಯ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾದ ಬಿಡುಗಡೆಗೆ ಸೆನ್ಸಾರ್‌ನಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

Advertisement

ಇದೇ ಜೂನ್‌ ಮೊದಲ ವಾರ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ’ ಎಂಬುದು ನಿರ್ದೇಶಕ ಅಪ್ಪಣ್ಣ ಸಂತೋಷ್‌ ಮಾತು.

“ಜಮುನಾ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸೀತಮ್ಮ ವಿ. ಟಿ ನಿರ್ಮಿಸಿರುವ “ಮನಸ್ಮಿತ’ ಚಿತ್ರಕ್ಕೆ ದೀಪಿಕಾ ವಿ. ಟಿ ಸಹ ನಿರ್ಮಾಣವಿದೆ. ಚಿತ್ರಕ್ಕೆ ಕೆ. ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಮಧು ತಂಬಕೆರೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹರಿಕಾವ್ಯ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್‌ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next