ಜಬಲ್ಪುರ: ಪ್ರಿಯಕರಳನ್ನು ಹತ್ಯೆ ಮಾಡಿ, ದೇಹವನ್ನು 35 ಭಾಗಗಳಾಗಿ ತುಂಡರಿಸಿ, ಫ್ರಿಡ್ಜ್ನಲ್ಲಿಟ್ಟಿದ್ದ ಶ್ರದ್ಧಾ ಕೊಲೆಯ ಪ್ರಕರಣ ಇನ್ನೂ ಜನರ ನೆನಪಿನ ಪಟಲದಿಂದ ಮಾಸುವ ಮುನ್ನವೇ ಮಧ್ಯಪ್ರದೇಶದ ಜಬಲ್ಪುರದಲ್ಲಿ ಮತ್ತೂಂದು ಭೀಕರ ಕೃತ್ಯ ನಡೆದಿದೆ.
ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ, ಮೃತದೇಹದ ವೀಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಆರೋಪಿ ಅಭಿಜಿತ್ ಪಾಟೀದಾರ್, ಶಿಲ್ಪ ಜರಿಯಾ(25) ಎಂಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ದ್ದಾನೆ. ಅಲ್ಲದೆ ಜಾಲತಾಣಗಳಲ್ಲಿ ವೀಡಿ ಯೋ ಪೋಸ್ಟ್ ಮಾಡಿದ್ದಾನೆ. ಅದರಲ್ಲಿ “ನಂಬಿಕೆಗೆ ಅನರ್ಹರಾದವರು ಬೇಕಾಗಿಲ್ಲ’ ಎಂದು ಹೇಳಿ, ಬೆಡ್‌ಶಿಟ್ ತೆಗೆದು ಬೆಡ್ ಮೇಲೆ ಇರುವ ಮಹಿಳೆಯ ಮೃತದೇಹವನ್ನು ತೋರಿಸುತ್ತಾನೆ.
ಇನ್ನೊಂದು ವೀಡಿಯೋದಲ್ಲಿ ಆತ, “ನಾನು ಮತ್ತು ನನ್ನ ಉದ್ಯಮ ಪಾಲುದಾರ ಜಿತೇಂದ್ರ ಕುಮಾರ್ ಇಬ್ಬರೊಂದಿಗೂ ಮಹಿಳೆ ಸಂಬಂಧ ಹೊಂದಿದ್ದಳು,’ ಎಂದು ಆರೋಪಿಸಿದ್ದಾನೆ. ಜಬಲ್ಪುರದ ಮೇಖಲಾ ರೆಸಾರ್ಟ್‌ನಲ್ಲಿ ಮೃತದೇಹ ಪತ್ತೆಯಾಗಿದೆ.