Advertisement

ಗ್ರಾ.ಪಂ. ಕಟ್ಟಡವೇರಿ ಆತ್ಮಹತ್ಯೆಗೆ ಯತ್ನ: ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ ಮಾಡಿದ ವ್ಯಕ್ತಿ

06:31 PM Sep 04, 2022 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಗ್ರಾಮದಲ್ಲಿನ ಮದ್ಯ ಮಾರಾಟ ನಿಲ್ಲಿಸಿ ಇಲ್ಲದಿದ್ದರೆ ನಾನು ಇಲ್ಲಿಂದ ಬಿದ್ದು ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಾಕನೂರು ಗ್ರಾಮದ ವ್ಯಕ್ತಿಯೊಬ್ಬರು ಇತ್ತೀಚೆಗೆ ಗ್ರಾಮದಲ್ಲಿನ ಗ್ರಾ.ಪಂ ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಡಿಯೋ ವೈರಲ್ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

Advertisement

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಸೇರಿದ್ದ ನೂರಾರು ಗ್ರಾಮಸ್ಥರು ಆತ್ಮಹತ್ಯಗೆ ಯತ್ನಿಸಿದ ವ್ಯಕ್ತಿಯ ಮನವೊಲಿಸಿ ಕೆಳಗಿಳಿಸಿದ್ದಾರೆ ಎಂದು ಹೇಳಲಾಗಿದೆ.

ಕಾಕನೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಆದರೆ ಮಾರಾಟ ಮಾಡುವವರ ವಿರುದ್ದ ಯಾರು ಮಾತನಾಡುತ್ತಿಲ್ಲ. ಅವರನ್ನು ತಡೆಯುತ್ತಿಲ್ಲ. ಗ್ರಾಮಕ್ಕೆ ಎಲ್ಲ ಅಧಿಕಾರಿಗಳು ಬರುತ್ತಾರೆ ಆದರೆ ಕಂಡು ಕಾಣದಂತೆ ನೋಡಿಕೊಂಡು ಗ್ರಾಮದಲ್ಲಿ ಸಂಚರಿಸಿ ಸುಮ್ಮನೆ ಮರಳಿ ಹೋಗುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕುವವರು ಇಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಾಗರ: ನಾಳೆ ಅಮ್ಮನ ವರ್ಷಾಂತ್ಯ; ಇಂದು ಪುತ್ರನ ಆತ್ಮಹತ್ಯೆ

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು: ಸುಮಾರು ವರ್ಷಗಳಿಂದ ಕುಳಗೇರಿ ಹೋಬಳಿಯ ಪ್ರತಿ ಗ್ರಾಮಗಳಲ್ಲೂ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರೂ ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೈಗೊಳ್ಳುತ್ತಿಲ್ಲ ಎಂದು ಗ್ರಾಮೀಣ ಭಾಗದ ಮಹಿಳೆಯರು ಹಾಗೂ ವೃದ್ಧರು ದೂರುತ್ತಿದ್ದಾರೆ. ಅಧಿಕಾರಿಗಳು ಮದ್ಯ ಮಾರಾಟ ಮಾಡುವವರನ್ನು ಭೇಟಿ ಕೊಡುತ್ತಾರೆ ಆದರೆ ಅಕ್ರಮ ಮದ್ಯ ಮಾರಾಟ ತಡೆಯುವ ಗೋಜಿಗೆ ಮಾತ್ರ ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Advertisement

ಮದ್ಯ ಮಾರಾಟಗಾರರಿಗೆ ಹೆದರುವ ಗ್ರಾಮಸ್ಥರು: ಗ್ರಾಮದಲ್ಲಿ ಎಷ್ಟೇ ನ್ಯಾಯ ನಿಬಾಧಿಗಳಿದ್ದರೂ ಬಗೆ ಹರಿಸುವ ಪ್ರಭಾವಿಗಳು, ಮುಖಂಡರು ಮದ್ಯ ಮಾರುವ ವ್ಯಕ್ತಿಗಳಿಗೆ ಹೆದರುತ್ತಾರೆ. ನಮಗ್ಯಾಕೆ ಈ ಉಸಾಬರಿ ಎಂದು ಅವರಿಂದ ದೂರ ಉಳಿಯುತ್ತಾರೆ ವಿನಃ ಮದ್ಯ ಮಾರಾಟ ನಿಲ್ಲಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ ಎಂದು ಸ್ವತಃ ಗ್ರಾಮದ ಪ್ರಮುಖರೊಬ್ಬರು ಹೇಳಿದ್ದಾರೆ.

ಈ ಹಿಂದೆ ದೂರದ ಉರಿಗೆ ಹೋಗಿ ಕುಡಿದು ಬರಬೇಕಿತ್ತು. ಆ ಕಾರಣ ಯಾರೂ ಸರಾಯಿ ಕುಡಿಯುವ ಗೋಜಿಗೆ ಹೋಗುತ್ತಿರಲಿಲ್ಲ. ಸರ್ ನಮ್ಮೂಲ್ಲೂ ಅಕ್ರಮ ಸಾರಾಯಿ ಮಾರಾಟ ಮಾಡುತ್ತಾರೆ. ಗೊತ್ತಿದ್ದರೂ ಯಾರು ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶದ ಎಲ್ಲ ಅಂಗಡಿಗಳಲ್ಲಿಯೂ ಸರಾಯಿ ಸಿಗುತ್ತಿದೆ ಇದರಿಂದ ಮಕ್ಕಳು ದುಶ್ಛಟಕ್ಕೆ ದಾಸರಾಗುತ್ತಿದ್ದಾರೆ. ಅಧಿಕಾರಿಗಳು ಈ ಅಕ್ರಮ ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next