Advertisement

ಅನೈತಿಕ ಸಂಬಂಧ: ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಗುಂಪು

12:51 PM Sep 03, 2022 | Team Udayavani |

ಜೈಪುರ: ಮಹಿಳೆಯೊಬ್ಬರ ಜತೆಗಿನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 25ರ ಹರೆಯದ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ, ಥಳಿಸಿ, ಆತನ ತಲೆಗೂದಲನ್ನು ಕತ್ತರಿಸಿ, ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.ಸುಮಾರು ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ವೈರಲ್ ಆಗುತ್ತಿದೆ.

Advertisement

ವ್ಯಕ್ತಿ ದೂರು ದಾಖಲಿಸಿಕೊಳ್ಳದ ಕಾರಣ, ಪೊಲೀಸರು ಸ್ವಯಂಪ್ರೇರಿತವಾಗಿ ಗುರುತಿಸಿ ಗುರುವಾರ ಸುಮಾರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನದೇ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಭೇಟಿಯಾಗಲು ಬಂದಾಗ ಸ್ಥಳೀಯರು ಮುಖ್ತಿಯಾರ್ ಖಾನ್ ನನ್ನು ಹಿಡಿದಿದ್ದಾರೆ ಎಂದು ಮೋಹನ್‌ಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಭವಾನಿ ಸಿಂಗ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಭೇಟಿಯಾಗಲು ಆಗಾಗ್ಗೆ ಪ್ರದೇಶಕ್ಕೆ ಬರುತ್ತಿದ್ದ ಖಾನ್ ಮೇಲೆ ಸ್ಥಳೀಯರು ಕಣ್ಣಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next