ಉತ್ತರಪ್ರದೇಶ: ಮನುಷ್ಯನ ದುರಾಸೆಗೆ ಮಿತಿ ಇಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ…ವ್ಯಕ್ತಿಯೊಬ್ಬ ಕಾನೂನು ಸಂಬಂಧಿ ದಾಖಲೆ ಪತ್ರಗಳಿಗೆ ಮೃತ ಮಹಿಳೆಯ ಹೆಬ್ಬೆಟ್ಟು ಗುರುತನ್ನು ತೆಗೆದುಕೊಂಡ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:ಸುಳ್ಯದಲ್ಲಿ ದಿನದ ಅಂತರದಲ್ಲಿ 2 ಪ್ರತ್ಯೇಕ ಘಟನೆ; ತೆಂಗಿನ ಮರದಿಂದ ಬಿದ್ದು ಇಬ್ಬರು ಮೃತ್ಯು
ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಮೃತ ಮಹಿಳೆಯ ಹೆಬ್ಬೆಟ್ಟು ಗುರುತನ್ನು ಪಡೆದು, ಮಹಿಳೆಯನ್ನು ವಂಚಿಸುವ ಕೆಲಸ ಇದಾಗಿದೆ ಎಂದು ವರದಿ ತಿಳಿಸಿದೆ.
Related Articles
45 ಸೆಕೆಂಡುಗಳ ವಿಡಿಯೋ ಕ್ಲಿಪ್ ನಲ್ಲಿ, ಕಾರಿನೊಳಗೆ ಮಲಗಿಸಿದ್ದ ಮೃತ ಮಹಿಳೆಯ ಹೆಬ್ಬೆಟ್ಟು ಗುರುತನ್ನು ವ್ಯಕ್ತಿಯೊಬ್ಬ ಬಲವಂತವಾಗಿ ತೆಗೆದುಕೊಳ್ಳುತ್ತಿರುವ ದೃಶ್ಯ ದಾಖಲಾಗಿದೆ. ಈ ವಿಡಿಯೋ ವೈರಲ್ ಆದ ನಂತರ ಆರೋಪಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.