ಮನುಷ್ಯನ ಎತ್ತರವನ್ನು ಹೆಚ್ಚಿಸುವ ನಕಲಿ ಔಷಧಗಳ ಕುರಿತು ಅನೇಕ ಜಾಹೀರಾತುಗಳನ್ನು ಕಂಡಿರುತ್ತೀರಿ. ಆದರೆ ಅಮೆರಿಕದ ಲಾಸ್ ವೇಗಸ್ನಲ್ಲಿ 68 ವರ್ಷದ ಒಬ್ಬ ಭೂಪ 1.2 ಕೋಟಿ ರೂ. ಖರ್ಚು ಮಾಡಿಕೊಂಡು ಮೂರು ಇಂಚು ಎತ್ತರ ಬೆಳೆಯಲು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.
ಈ ಹಿಂದೆ ರಾಯ್ ಕಾನ್ ಎಂಬುವವರು 5.6 ಇಂಚು ಇದ್ದರು. ಯುವಕನಾದಾಗಿನಿಂದಲೂ ತಮ್ಮ ಎತ್ತರ ಕಡಿಮೆ ಇದ್ದು, ಇನ್ನಷ್ಟು ಎತ್ತರ ಆಗಬೇಕೆಂದು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹೆಂಡತಿಗೂ ರಾಯ್ ಎತ್ತರವಿರಬೇಕು ಎಂದು ಅನಿಸಿತ್ತಂತೆ.
ಅಂತಿಮವಾಗಿ ಹಣ ಹೊಂದಿಸಿ, ತಮ್ಮ 68 ವರ್ಷದಲ್ಲಿ ಕಾಸ್ಮೆಟಿಕ್ ಸರ್ಜನ್ ಬಳಿ ತೊಡೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಈಗ 5.9 ಇಂಚು ಎತ್ತರ ಇದ್ದಾರೆ.