Advertisement

ಗರ್ಭಿಣಿಯಂತಾಗಲು ಹೋಗಿ ಒದ್ದಾಡಿದ!

09:26 PM Aug 23, 2021 | Team Udayavani |

ವಾಷಿಂಗ್ಟನ್‌: ಮಗುವನ್ನು ಗರ್ಭದಲ್ಲಿರಿಸಿಕೊಂಡು ಎಲ್ಲ ಕೆಲಸಗಳನ್ನು ಮಾಡುವುದು ಗರ್ಭಿಣಿಗೆ ಸುಲಭದ ಕೆಲಸವಲ್ಲ. ಗರ್ಭಿಣಿ ಅನುಭವಿಸುವ ಕಷ್ಟವನ್ನು ತಾನೂ ಒಮ್ಮೆ ಅನುಭವಿಸಿ ನೋಡಬೇಕೆಂದು ಮೈಟ್‌ಲ್ಯಾಂಡ್‌ ಹಾನ್ಲ ಹೆಸರಿನ ಟಿಕ್‌ಟಾಕರ್‌ ಪ್ರಯತ್ನಿಸಿದ್ದಾನೆ.

Advertisement

ಹೊಟ್ಟೆಗೆ ದೊಡ್ಡದೊಂದು ಕಲ್ಲಂಗಡಿ, ಎದೆಗೆ ಎರಡು ಕರ್ಬೂಜದ ಹಣ್ಣನ್ನು ಕಟ್ಟಿಕೊಂಡಿದ್ದಾನೆ. ಈ ರೀತಿ ಮಲಗಿದವನಿಗೆ ಹಾಸಿಗೆಯಿಂದ ಏಳುವುದೇ ದೊಡ್ಡ ಸಾಹಸವಾಗಿದೆ. ಅದಾದ ಮೇಲೆ ಶೂ ಹಾಕಿಕೊಳ್ಳುವುದು, ಶೌಚಾಲಯಕ್ಕೆ ಹೋಗುವುದು…

ಹೀಗೆ ಅನೇಕ ರೀತಿಯ ಕೆಲಸಗಳನ್ನು ಆತ ಮಾಡಿದ್ದಾನೆ. ಹೊಟ್ಟೆಯ ತೂಕ ತಾಳಲಾರದೆ ಬೆನ್ನು ನೋವು ಬಂದು ಒದ್ದಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next