Advertisement

ಬೆಕ್ಕಿನ ಜಗಳ!;ಯುವತಿಗೆ ಮರ್ಮಾಂಗ ತೋರಿಸಿ ಬೆದರಿಸಿದ ಸೊಕ್ಕಿದ ಯುವಕ

04:28 PM Jun 15, 2017 | |

ಚಿಕ್ಕಬಳ್ಳಾಪುರ: ಇಲ್ಲಿನ ಕೊರಚರ ಪೇಟೆ ಎಂಬಲ್ಲಿ  ಯುವಕನೊಬ್ಬ  ಯುವತಿಗೆ ಗುಪ್ತಾಂಗ ತೋರಿಸಿ ಬೆದರಿಕೆ ಹಾಕಿದ ಹೇಯ ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 

Advertisement

ಪುರುಷೋತ್ತಮ್‌ ಎಂಬ ಯುವಕ ಯುವತಿಯ ಮನೆ ಎದುರು ಬಂದು ಗಲಾಟೆ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗುಪ್ತಾಂಗ ತೋರಿಸಿದ್ದಾನೆ. ಪುರುಷೋತ್ತಮ್‌ನ ದುರ್ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡಿದ್ದು ಪೊಲೀಸರಿಗೆ ದೂರು ನೀಡಿದ್ದಾಳೆ.

ಘಟನೆಗೆ ಕಾರಣವಾಗಿದ್ದು ಬೆಕ್ಕು!
ಯುವತಿ ಸಾಕಿರುವ ಬೆಕ್ಕು ಪುರುಷೋತ್ತಮ್‌ ತಾಯಿಯ ಮನೆಯ ಬಳಿ ತಿರುಗಾಡಿದ್ದು ಈ ಬಗ್ಗೆ ತಗಾದೆ ತೆಗೆದು ಜಗಳ ಆರಂಭವಾಗಿದೆ ಎಂದು ಹೇಳಲಾಗಿದೆ.

ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆಯ ಸಮೀಪದಲ್ಲೇ ಈ ಘಟನೆ ನಡೆದಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಚಿತ್ರೀಕರಿಸಿಕೊಂಡಿರುವ ವಿಡಿಯೋವನ್ನು ಪೊಲಿತàಸರಿಗೆ ನೀಡಿದ್ದು ತನಿಖೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next