Advertisement

ಸಂಸದೆಯ ಚುಡಾಯಿಸಿದನಿಗೆ 364 ದಿನ ಜೈಲು ಶಿಕ್ಷೆ!

08:48 PM Jul 04, 2023 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕನ್‌ ರಾಜಕಾರಣಿ, ಕಾಂಗ್ರೆಸ್‌ ಸದಸ್ಯೆ ಪ್ರಮಿಳಾ ಜಯಪಾಲ್‌ ಅವರನ್ನು ಹಿಂಬಾಲಿಸಿ, ಚುಡಾಯಿಸಿ, ಜೀವ ಬೆದರಿಕೆ ಹಾಕಿರುವ ಅಪರಾಧದ ಮೇರೆಗೆ 49 ವರ್ಷದ ವ್ಯಕ್ತಿಯೊಬ್ಬನಿಗೆ ವಾಷಿಂಗ್ಟನ್‌ ನ್ಯಾಯಾಲಯವು 364 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

Advertisement

ಬ್ರೆಟ್‌ ಫಾರ್ಸೆಲ್‌ ಎಂಬಾತ ಹ್ಯಾಂಡ್‌ಗನ್‌ ಹಿಡಿದು, ಜಯಪಾಲ್‌ ಅವರ ನಿವಾಸದೆದುರು ಹಾಜರಾಗಿದ್ದ. ಅಲ್ಲದೇ, ಪ್ರಮಿಳಾ ಅವರನ್ನು ಭಾರತಕ್ಕೆ ಹಿಂದಿರುಗುವಂತೆಯೂ, ಇಲ್ಲದಿದ್ದಲ್ಲಿ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಬಳಿಕ ಸೀಟಲ್‌ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಪ್ರಮಿಳಾ ಅವರಿಗೆ ಕಿರುಕುಳ ನೀಡಿರುವುದನ್ನು ಪರಿಗಣಿಸಿ, ನ್ಯಾಯಾಲಯವು ಆತನಿಗೆ ಶಿಕ್ಷೆ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next