ಜಕಾರ್ತ: ಯೂಟ್ಯೂಬರ್ ಗಳು ತಮ್ಮ ವಿಡಿಯೋ ಹೆಚ್ಚು ವಿವ್ಸ್ ಬರಬೇಕೆಂದು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಹಲವರ ಪ್ರತಿಭೆಗಳು ಕೂಡ ಅಲ್ಲಿ ಅನಾವರಣಗೊಳ್ಳುತ್ತದೆ. ಆದರೇ ಇಲ್ಲೊಬ್ಬ ವ್ಯಕ್ತಿ ಯೂಟ್ಯೂಬ್ ನಲ್ಲಿ ತನ್ನದೇ 2 ಗಂಟೆಗಳಿಗೂ ಹೆಚ್ಚು ಕಾಲ ಇರುವ ವಿಡಿಯೋ ಅಪ್ಲೋಡ್ ಮಾಡಿದ್ದು ಏನೂ ಮಾಡದೇ ಲಕ್ಷಗಟ್ಟಲೇ ವಿವ್ಸ್ ಪಡೆದುಕೊಂಡಿದ್ದಾನೆ.
ಹೌದು. ಇಂಡೋನೇಶ್ಯಾದ ಮೊಹಮ್ಮದ್ ದೀದಿತ್ ಎಂಬ ಯೂಟ್ಯೂಬರ್ 2 ಗಂಟೆ 20 ನಿಮಿಷ 52 ಸೆಕೆಂಡ್ ಕೇವಲ ಕಣ್ಣು ಮಿಟುಕಿಸಿದ್ದಕ್ಕೆ ಲಕ್ಷಾಂತರ ವಿವ್ಸ್ ಪಡೆದಿದ್ದಾನೆ. ಈತ ಕೇವಲ ಕ್ಯಾಮಾರವನ್ನು ದಿಟ್ಟಿಸಿ ನೋಡಿದ್ದು, ಯಾವುದೇ ಶಬ್ದವನ್ನು ಕೂಡ ಉಚ್ಚರಿಸಿಲ್ಲ. ಏನಾದರೂ ವಿಶೇಷವಿದೆ ಎಂದು ನೀವು ಕೊನೆಯವರೆಗೂ ನೊಡಿದರೇ ನಿರಾಸೆಯಾಗುವುದು ಖಂಡಿತ.
ಯುವಜನರಿಗೆ ಶಿಕ್ಷಣ ನೀಡುವ ವಿಷಯವನ್ನು ಪೋಸ್ಟ್ ಮಾಡುವಂತೆ ಇಂಡೋನೇಶಿಯನ್ ಸೊಸೈಟಿ ಕೇಳಿಕೊಂಡಿತ್ತು. ಇಷ್ಟವಿಲ್ಲದೆ ಭಾರವಾದ ಹೃದಯದಿಂದ ಇದನ್ನು ಮಾಡಿದ್ದು ಈ ವಿಡಿಯೋದ ಲಾಭದ ಬಗ್ಗೆ ಮಾತನಾಡಬೇಕೆಂದರೇ ಅದು ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ನಿಮಗೆಲ್ಲಾ ಮನರಂಜನೆ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಮೊಹಮ್ಮದ್ ದೀದಿತ್ ಬರೆದುಕೊಂಡಿದ್ದಾನೆ.
ಜುಲೈ 10 ರಂದು ಈ ವಿಡಿಯೋ ವೈರಲ್ ಆಗಿದ್ದು 1.9 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಕೆಲವರು ಇದನ್ನು ಧ್ಯಾನ ಮಾಡುತ್ತಿದ್ದಾರೆ ಎಂದರೇ, ಇನ್ನು ಹಲವರು ವಿಡಿಯೋ ಶೂಟಿಂಗ್ ಗಾಗಿ ಯೋಚನೆ ಮಾಡುತ್ತಿರಬಹುದು ಎಂದಿದ್ದಾರೆ.
ಈ ವ್ಯಕ್ತಿ ಏನು ಮಾಡದೇ ಎರಡು ಗಂಟೆ ಕಳೆದಿದ್ದಾನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದರೆ, ಒಬ್ಬಾತ ಈತ 362 ಬಾರಿ ಕಣ್ಣು ಮಿಟುಕಿಸಿದ್ದಾನೆಂದು ಲೆಕ್ಕ ಹಾಕಿದ್ದಾನೆ. ಅದಾಗ್ಯೂ ಈತ 2 ಗಂಟೆಗೂ ಹೆಚ್ಚು ಕಾಲ ಸುಮ್ಮನೆ ಕುಳಿತಿದ್ದು ಆಶ್ಚರ್ಯವೇ ಸರಿ.