ಕೊಲರಾಡೋ: ಹುಟ್ಟು ಹಬ್ಬದ ಪಾರ್ಟಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಕೊಲರಾಡೋದಲ್ಲಿ ನಡೆದಿದೆ.
ಕೊಲೊರಾಡೋ ಸ್ಪ್ರಿಂಗ್ಸ್ ನ ಪೂರ್ವ ಭಾಗದಲ್ಲಿರುವ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ಗುಂಡಿನ ದಾಳಿ ನಡೆದಿದೆ. ಸ್ನೇಹಿತರು, ಕುಟುಂಬ ಮತ್ತು ಮಕ್ಕಳು ಭಾಗವಹಿಸಿದ ಪಾರ್ಟಿಯಲ್ಲಿ ಒಳನುಗ್ಗಿದ ಬಂದೂಕುಧಾರಿ ಗುಂಡು ಹಾರಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೆ 100 ಕೋಟಿ ರೂ. ಘೋಷಿಸಿದ ‘ಇನ್ಫೋಸಿಸ್’ ಸುಧಾಮೂರ್ತಿ
ಶಂಕಿತ ಶೂಟರ್ ನು ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವತಿಯ ಬಾಯ್ ಫ್ರೆಂಡ್ ಎನ್ನಲಾಗಿದೆ. ಆರು ಜನರನ್ನು ಕೊಂದ ಆರೋಪಿಯು ನಂತರ ತನ್ನನ್ನು ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ಹಿಂದಿನ ನಿಖರ ಉದ್ದೇಶ ಇದುವರೆಗೆ ತಿಳಿದು ಬಂದಿಲ್ಲ. ಪೊಲೀಸರು ಇದುವರೆಗೂ ಆರೋಪಿ ಮತ್ತು ಸಾವನ್ನಪ್ಪಿದವರ ಗುರುತಿನ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: ರಾಜ್ಯದ ಜನತೆಗೂ ಪ್ಯಾಕೇಜ್? ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರದಿಂದ ಚಿಂತನೆ