Advertisement

ಬೆಂಗಳೂರು: ಫ್ಲೈ ಓವರ್ ಮೇಲೆ ನಿಂತು ನೋಟಿನ ಮಳೆ ಸುರಿಸಿದ ವ್ಯಕ್ತಿ ಯಾರು?

06:44 PM Jan 24, 2023 | Team Udayavani |

ಬೆಂಗಳೂರು : ನಗರದ ಕೆಆರ್ ಮಾರ್ಕೆಟ್ ಫ್ಲೈಓವರ್ ನಲ್ಲಿ ಮಂಗಳವಾರ ಬೆಳಗ್ಗೆ ವ್ಯಕ್ತಿಯೊಬ್ಬರು ನೋಟಿನ ಮಳೆ ಸುರಿಸಿದ ಘಟನೆ ನಡೆದಿದ್ದು, ಘಟನೆ ವೇಳೆ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗಲು ಕಾರಣವಾಗಿದ್ದು, ನೋಟುಗಳನ್ನು ಸಂಗ್ರಹಿಸಲು ಜನರು ತಮ್ಮ ವಾಹನಗಳನ್ನು ಫ್ಲೈ ಓವರ್ ಮತ್ತು ಅದರ ಕೆಳಗೆ ನಿಲ್ಲಿಸಿ ಮುಗಿಬಿದ್ದರು.

Advertisement

ಹಲವು ಬಾರಿ ಶೇರ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೂಟ್‌ ಧರಿಸಿ ನಗರದ ಕೆಆರ್‌ಮಾರೆಟ್‌ ಫ್ಲೈಓವರ್‌ನಿಂದ 10 ರೂಪಾಯಿ ನೋಟುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಕೆಳಗಿನ ರಸ್ತೆಯಲ್ಲಿದ್ದ ಜನರು ಅವುಗಳನ್ನು ಸಂಗ್ರಹಿಸಲು ಹರಸಾಹಸ ಪಟ್ಟರು.

ದ್ವಿಚಕ್ರ ವಾಹನಗಳು ಫ್ಲೈಓವರ್‌ನ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ಗಾಳಿಯು ಕೆಲವು ನೋಟುಗಳನ್ನು ಫ್ಲೈಓವರ್‌ಗೆ ಹಿಂತಿರುಗಿಸಿತು ಮತ್ತು ಜನರು ಅವುಗಳನ್ನು ಸಂಗ್ರಹಿಸಲು ವಾಹನಗಳನ್ನು ನಿಲ್ಲಿಸಿದರು.

ನೋಟು ತುಂಬಿದ ಚೀಲದೊಂದಿಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ, ಅವುಗಳನ್ನು ಫ್ಲೈಓವರ್‌ನ ಎರಡೂ ಬದಿಗಳಿಂದ ಎಸೆದು, ದಟ್ಟಣೆಯಲ್ಲೇ ತನ್ನ ಸ್ಕೂಟರ್‌ನಲ್ಲಿ ಹೊರಟುಹೋಗಿದ್ದಾರೆ. ಸೂಟು ಬೂಟು ಧರಿಸಿ ಕತ್ತಿನಲ್ಲಿ ಗೋಡೆ ಗಡಿಯಾರ ಧರಿಸಿದ್ದ ವ್ಯಕ್ತಿ ಇವೆಂಟ್ ಪ್ಲಾನರ್ ಆಗಿರುವ ಅರುಣ್ ಎನ್ನುವವರಾಗಿದ್ದು, ಬೆಂಗಳೂರಿನ ನಾಗರಬಾವಿಯ ನಿವಾಸಿಯಾಗಿದ್ದು, ಇವೆಂಟ್‌ ಸಂಸ್ಥೆಯ ಸಿಇಓ ಆಗಿದ್ದು, ವಿವಿಧ ಕಾರ್ಯಕ್ರಮಗಳಿಗೆ ಇವೆಂಟ್ ಆಯೋಜನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಹಣ ಎಸೆದ ಅರುಣ್ ಸಂಕಷ್ಟಕ್ಕೆ ಸಿಲುಕಿದ್ದು, ಕೆ.ಆರ್.ಮಾರ್ಕೆಟ್ ಪೊಲೀಸರು ಅರುಣ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ., ಎನ್ ಸಿ ಆರ್ ದಾಖಲು ಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತನೆ ತೋರಿದ್ದು ಯಾಕೆ ಎನ್ನುವ ಮಾಹಿತಿ ಕೋರಿ ನೋಟಿಸ್ ನೀಡಿದ್ದಾರೆ.ಅದಾಗ್ಯೂ ಉತ್ತರಿಸದಿದ್ದಾಗ ಅರುಣ್ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಗೆ ತೆರಳಿ ಅರುಣ್​ ಜೊತೆ ಮಾತುಕತೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.

Advertisement

ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ನನಗೆ ಸಮಯ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ. ದಯವಿಟ್ಟು ನನಗೆ ಸಮಯ ಕೊಡಿ ಎಂದು ಹೇಳಿದ್ದಾನೆ.

ನಗರದ ಅಪರಿಚಿತ ಜನರ ಮೇಲೆ ಏಕೆ ನೋಟುಗಳ ಮಳೆ ಸುರಿಸಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಕೆಲವು ಸ್ಥಳೀಯ ವರದಿಗಳ ಪ್ರಕಾರ, ಅರುಣ್ ತನ್ನ ಜೀವನದಲ್ಲಿ ಬೇಸರಗೊಂಡಿದ್ದರು, ಅದು ಅವರ ಬಳಿ ಇದ್ದ ಹಣವನ್ನು ಎಸೆಯಲು ಪ್ರೇರೇಪಿಸಿತು ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next