Advertisement

ಮ್ಯಾಚ್‌ ಗೆದ್ದ ‘ಅಥರ್ವ ಪ್ರಕಾಶ್‌’; ಕರಾವಳಿ ಹುಡುಗನ ಕಣ್ತುಂಬ ಕನಸು

04:02 PM May 13, 2022 | Team Udayavani |

ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸಬರ ಹವಾ ಜೋರಾಗಿದೆ. ವಿಭಿನ್ನ ಕಥೆ, ಪಾತ್ರ, ಲುಕ್‌ ಅಂತ ಭಿನ್ನವಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೇಗೆ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾದ “ಮ್ಯಾನ್‌ ಆಫ್ ದಿ ಮ್ಯಾಚ್‌’ ಚಿತ್ರದಲ್ಲಿ ನಟಿಸಿರುವ ಅಥರ್ವ ಪ್ರಕಾಶ್‌ ಕೂಡಾ ತಮ್ಮ ನಟನೆ ಮೂಲಕ ಗಮನ ಸೆಳೆಯುವ ಜೊತೆಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Advertisement

ಈ ಮೊದಲು ಸಾಕಷ್ಟು ತುಳು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಅಥರ್ವ ಪ್ರಕಾಶ್‌ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಹೊರಹೊಮ್ಮಿದ್ದಾರೆ. ತಮ್ಮ ಸಮಯಕ್ಕೆ ತಕ್ಕ ಅಭಿನಯ, ನಗುಮೊಗದ ಮೂಲಕ ಅಥರ್ವ ಸಿನಿಮಂದಿಯ ಮೆಚ್ಚುಗೆ ಪಾತ್ರರಾಗಿದ್ದಾರೆ. ಯಾವುದೇ ಫೈಟ್‌, ಬಿಲ್ಡಪ್‌ ಇರದೇ ತಮ್ಮ ಸಹಜ ಅಭಿನಯ ಮೂಲಕ ಪ್ರೇಕ್ಷಕರ ಮನಗೆದ್ದ ಅಥರ್ವನಿಗೆ ಚಿತ್ರರಂಗದಿಂದಲೂ ಹೊಸ ಅವಕಾಶಗಳು ಹುಡುಕಿ ಬರುತ್ತಿವೆ. ಈ ಮೂಲಕ ಅಥರ್ವ ತಮ್ಮ ಚೊಚ್ಚಲ ಚಿತ್ರದಲ್ಲೇ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಅಥರ್ವ “ಚಿತ್ರದಲ್ಲಿ ನನ್ನ ಅಭಿನಯ ಕಂಡು ಸಾಕಷ್ಟು ಜನ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ಪಾತ್ರದ ಮಿತಿಯಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದೀರಾ ಹಾಗೂ ನಟನೆ ತುಂಬಾ ನೈಜವಾಗಿ ಮೂಡಿಬಂದಿದೆ ಎಂಬ ಉತ್ತಮ ಪ್ರತಿಕ್ರಿಯೆಗಳು ಕೇಳಿ ಬಂತು. ಇದು ತುಂಬ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಅಭಿನಯಿಸಿ ಜನರ ಮನಗೆಲ್ಲುವ ಆಸೆ ಇದೆ’ ಎಂಬ ಮಾತುಗಳನ್ನಾಡುತ್ತಾರೆ.

ಇದನ್ನೂ ಓದಿ:‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

ಈ ನಡುವೆಯೇ ಅಥರ್ವ “ನಾನ್‌ ವೆಜ್‌’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದು , ಚಿತ್ರ ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರುವ ನೀರಿಕ್ಷೆಯಲ್ಲಿದ್ದಾರೆ. ಜೊತೆಯಲ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಇತರ ಭಾಷೆಗಳತ್ತ ಹೆಜ್ಜೆ ಇಟ್ಟಿರುವ ಈ ಹುಡುಗ ತಮಿಳಿನ “ಡೀಲ್‌’ ಚಿತ್ರದಲ್ಲಿ ಅವಕಾಶ ಪಡೆದಿದ್ದು, ಚಿತ್ರೀಕರಣ ಇದೇ ಆಗಸ್ಟ್‌ ನಿಂದ ಪ್ರಾರಂಭವಾಗಲಿದೆ. ವಿಭಿನ್ನ ಪಾತ್ರಗಳ ಮೂಲಕ ಭಾಷೆಗಳ ಗಡಿ ಮೀರಿ ಚಿತ್ರರಂಗದಲ್ಲಿ ಬೆಳೆಯುವ ಕನಸನ್ನು ಅಥರ್ವ ಪ್ರಕಾಶ್‌ ಹೊತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next