Advertisement

ಬುಡಕಟ್ಟು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಸೆರೆ

12:44 PM Dec 25, 2017 | udayavani editorial |

ಥಾಣೆ : ಥಾಣೆ ಜಿಲ್ಲೆಯ ಪಡಗಾ ತಾಲೂಕಿನಲ್ಲಿ  ಅಪ್ರಾಪ್ತ ವಯಸ್ಸಿನ ಬುಡಕಟ್ಟು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪದ ಮೇಲೆ 25 ವರ್ಷದ ಪ್ರಾಯದ ಸೆಕ್ಯುರಿಟಿ ಗಾರ್ಡ್‌ ಒಬ್ಟಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಡಿ.13ರ ರಾತ್ರಿ ಆರೋಪಿ ಸೆಕ್ಯುರಿಟಿ ಗಾಡ್‌ 9ರ ಹರೆಯದ ಬಾಲಕಿ ತನ್ನ ಹೆತ್ತವರ ಜತೆಗೆ ತನ್ನ ಗುಡಿಸಲಲ್ಲಿ ಮಲಗಿದ್ದ ವೇಳೆ ಅಕ್ರಮವಾಗಿ ಪ್ರವೇಶಿಸಿ ಬಾಲಕಿಯ ಗುಪ್ತಾಂಗಗಳನ್ನು ಮುಟ್ಟಿ ದೌರ್ಜನ್ಯ ಎಸಗಿದ್ದ. ಬಾಲಕಿ ಬೊಬ್ಬಿಟ್ಟಾಗ ಎಚ್ಚೆತ್ತ ಹೆತ್ತವರು ಆರೋಪಿಯನ್ನು ಹಿಡಿಯಲೆತ್ನಿಸಿದಾಗ ಆತ ಪರಾರಿಯಾದ. 

ಬಳಿಕ ಪೊಲೀಸರು ದೂರಿನ ಆಧಾರದಲ್ಲಿ ಆರೋಪಿಯನ್ನು ಸೆರೆ ಹಿಡಿದರು. ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಬಾಲಕಿಯು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next