Advertisement

ಪ್ರಿಯತಮೆಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಪ್ರಿಯಕರ

03:05 PM Mar 06, 2017 | Team Udayavani |

ಮೀರತ್‌ : 19ರ ಹರೆಯದ ಪ್ರಿಯತಮೆಯನ್ನು ಆಕೆಯ ಪ್ರಿಯಕರನೇ ಗುಂಡಿಕ್ಕಿ ಕೊಂದು ಬಳಿಕ ತಾನೂ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಲಂಜಾರಿ ಗ್ರಾಮದಲ್ಲಿ ನಡೆದಿದೆ. 

Advertisement

19ರ ಹರೆಯದ ಲಲಿತಾ ಮತ್ತು 25ರ ಹರೆಯದ ಸಂದೀಪ್‌ ನಡುವಿನ ಪ್ರೇಮ ಸಂಬಂಧಕ್ಕೆ ಅವರ ಮನೆಯವರ ಒಪ್ಪಿಗೆ ಇರಲಿಲ್ಲ. ಇದರಿಂದ ಹತಾಶನಾದ ಸಂದೀಪ್‌, ಲಲಿತಾಳನ್ನು ಗುಂಡಿಕ್ಕಿ ಸಾಯಿಸಿ ಬಳಿಕ ತಾನೂ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಗುಂಡೇಟಿಗೆ ಗುರಿಯಾಗಿದ್ದ  ಲಲಿತಾ ಮತ್ತು ಸಂದೀಪ್‌ ಅವರ ಶವಗಳು ಹೊಲದಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಮೃತರ ಮನೆಯವರು ದೂರು ದಾಖಲಿಸಿದರೆ ಮಾತ್ರವೇ ತಾವು ತನಿಖೆ ಮುಂದುವರಿಸುವುದಾಗಿ ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next