ಪುಣೆ: ಲೋನಾವಾಲಾ ಹಿನ್ನೀರಿನಲ್ಲಿ ಭಾನುವಾರ ಕುಟುಂಬದ ಐದು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಗೆಳೆಯರ ಜೊತೆ ಮಹಾರಾಷ್ಟ್ರದ ತಮ್ಹಿನಿ ಘಾಟ್‌ನಲ್ಲಿರುವ ಜಲಪಾತಕ್ಕೆ ತೆರಳಿದ ವ್ಯಕ್ತಿಯೊಬ್ಬ ತನ್ನ ಗೆಳೆಯರ ಎದುರು ಜಲಪಾತಕ್ಕೆ ಜಿಗಿದು ನೀರು ಪಾಲಾಗಿರುವ ಘಟನೆ ನಡೆದಿತ್ತು ಇದೀಗ ಎರಡು ದಿನಗಳ ಬಳಿಕ ಆತನ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಪಿಂಪ್ರಿ-ಚಿಂಚ್‌ವಾಡ್‌ನ ಭೋಸಾರಿ ನಿವಾಸಿಯಾಗಿರುವ ಸ್ವಪ್ನಿಲ್ ಧಾವ್ಡೆ ಎನ್ನಲಾಗಿದ್ದು.
ಕಳೆದ ಶನಿವಾರ ತನ್ನ ಗೆಳೆಯರ ಜೊತೆ ಇಲ್ಲಿನ ಜಲಪಾತಕ್ಕೆ ಬಂದಿದ್ದ ಸ್ವಪ್ನಿಲ್ ಗೆಳೆಯರ ಬಳಿ ವಿಡಿಯೋ ಮಾಡಲು ಹೇಳಿ ಜಲಪಾತಕ್ಕೆ ಜಿಗಿದಿದ್ದಾನೆ ಆದರೆ ದುರದೃಷ್ಟವಶಾತ್ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕಿ ನೀರಿನಿಂದ ಮೇಲೆ ಬರಲಾಗದೆ ಗೆಳೆಯರ ಎದುರೇ ಕೊಚ್ಚಿ ಹೋಗಿದ್ದಾನೆ, ಘಟನೆ ಬೆನ್ನಲ್ಲೇ ರಕ್ಷಣಾ ತಂಡ ಶೋಧ ಕಾರ್ಯಾಚರಣೆ ನಡೆಸಿದರು ಸ್ವಪ್ನಿಲ್ ಪತ್ತೆಯಾಗಲಿಲ್ಲ ಇದೀಗ ಘಟನೆ ನಡೆದು ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಸ್ವಪ್ನಿಲ್ ಜಲಪಾತಕ್ಕೆ ಜಿಗಿಯುವ ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿರುವ ದೃಶ್ಯ ಆತನ ಗೆಳೆಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.