Advertisement

ಸೋದರಿಯ ಸಾವಿನಿಂದ ಮನನೊಂದು ಆಕೆಯ ಚಿತೆಗೆ ಹಾರಿದ ವ್ಯಕ್ತಿ!

12:26 PM Jun 13, 2022 | Team Udayavani |

ಭೋಪಾಲ್: ಸೋದರ ಸಂಬಂಧಿಯ ಸಾವಿನಿಂದ ಮನನೊಂದ ವ್ಯಕ್ತಿಯೊಬ್ಬರು ಆಕೆಯ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದ ಜ್ಯೋತಿ ಎಂಬವರು ಕಳೆದ ಶುಕ್ರವಾರ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು. ಶನಿವಾರ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಜ್ಯೋತಿ ಚಿತೆಗೆ ಬೆಂಕಿ ನೀಡಿದ ಬಳಿಕ ಸಂಬಂಧಿಕರು ಮನೆಗೆ ತೆರಳಿದ್ದರು. ಇದಾಗಿ ಸ್ವಲ್ಪ ಸಮಯದ ಬಳಿಕ ಸೋದರ ಸಂಬಂಧಿ ಕರಣ್ ಸ್ಮಶಾನದ ಬಳಿ ಬಂದಿದ್ದಾರೆ.

ಉರಿಯುತ್ತಿದ್ದ ಚಿತೆಯ ಬಳಿ ಬಂದ ಕರಣ್ ಮೊದಲು ನಮನ ಸಲ್ಲಿಸಿದ್ದಾನೆ. ನಂತರ ಚಿತೆಯ ಮಧ್ಯಕ್ಕೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ರಾಹುಲ್ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಈತನನ್ನು ಕಂಡ ಕೂಡಲೇ ಗ್ರಾಮಸ್ಥರು ಮನೆಯವರಿಗೆ ಮಾಹಿತಿ ನೀಡಿದರಾದರೂ, ಕುಟುಂಬಸ್ಥರು ಸ್ಥಳಕ್ಕೆ ತಲುಪುವಷ್ಟರಲ್ಲಿ 21 ವರ್ಷದ ಯುವಕ ತೀವ್ರವಾಗಿ ಸುಟ್ಟು ಕರಕಲಾಗಿದ್ದಾನೆ.

Advertisement

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕರಣ್ ಮೃತಪಟ್ಟಿದ್ದ ಎಂದು ಮಜ್ಗವಾನ್ ಗ್ರಾಮದ ಸರಪಂಚ್ ಭಗತ್ ಸಿಂಗ್ ಘೋಸಿ ಹೇಳಿದ್ದಾರೆ. ರವಿವಾರ ಬೆಳಗ್ಗೆ ಈತನ ಅಂತ್ಯಕ್ರಿಯೆಯನ್ನು ಜ್ಯೋತಿ ಸಮಾಧಿಯ ಬಳಿಯೇ ನಡೆಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next