Advertisement

Rajasthan: ರೀಲ್ಸ್ ಚಿತ್ರೀಕರಣದ ವೇಳೆ 150 ಅಡಿಯಿಂದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ ಯುವಕ

08:41 AM May 27, 2024 | Team Udayavani |

ಜೈಪುರ: ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡುವ ವೇಳೆ ಯುವಕನೊಬ್ಬ 150 ಅಡಿ ಎತ್ತರದಿಂದ ಆಳವಾದ ನೀರಿಗೆ ಹಾರಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ಭಾನುವಾರ(ಮೇ.26 ರಂದು) ನಡೆದಿದೆ.

Advertisement

ಮೃತ ಯುವಕನನ್ನು ಉದಯಪುರ ನಿವಾಸಿ ದಿನೇಶ್ ಮೀನಾ ಎಂದು ಗುರುತಿಸಲಾಗಿದೆ. ಈತ ತನ್ನ ನಾಲ್ವರು ಸ್ನೇಹಿತರೊಂದಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಣಕ್ಕೆ ಕ್ವಾರಿಗೆ ಬಂದಿದ್ದ.

ದಿನೇಶ್ ಅವರ ಸ್ನೇಹಿತರೊಬ್ಬರು ಮೊದಲು ಬಂಡೆಯಿಂದ ಜಾರಿ ನೀರಿಗೆ ಬಿದ್ದಿದ್ದರು, ಆದರೆ ಅವರು ಹೇಗಾದರೂ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು.

ಆದರೆ ದಿನೇಶ್ ಸುಮಾರು 150 ಅಡಿ ಎತ್ತರದಿಂದ ನೀರಿಗೆ ಹಾರಿದ್ದಾರೆ. ಸುಮಾರು ಹೊತ್ತಾದರೂ ನೀರಿನಿಂದ ಹೊರಗೆ ಬಾರದಿದ್ದಾಗ ಆತನ ಸ್ನೇಹಿತರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ದಿನೇಶ್ ಮೀನಾ ಸುಮಾರು 150 ಅಡಿ ಆಳದ ನೀರಿಗೆ ಹಾರಿ ನೀರಿನಲ್ಲಿ ಮುಳುಗಿದರು. ಸ್ಥಳೀಯ ಪೊಲೀಸರು ಮತ್ತು ಡೈವರ್‌ಗಳು ಮಾಹಿತಿ ಪಡೆದ ನಂತರ ಸ್ಥಳಕ್ಕೆ ತಲುಪಿದರು ಮತ್ತು ಮೂರು ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಅವರ ದೇಹವನ್ನು ಹೊರತೆಗೆಯಲಾಗಿದೆ ನಾಗರಿಕ ಭದ್ರತಾ ವಿಭಾಗದ ಮುಳುಗು ತಜ್ಞ ನರೇಶ್ ಚೌಧರಿ ಹೇಳಿದ್ದಾರೆ.

Advertisement

ಮೃತದೇಹವನ್ನು ಎಂ.ಬಿ.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತ ಯುವಕನ ಕುಟುಂಬಕ್ಕೆ ದುರಂತದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಮಂಗಳವಾರವಷ್ಟೇ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ 18 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ ಮಾಡಲು 100 ಅಡಿ ಎತ್ತರದಿಂದ ಆಳವಾದ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next