Advertisement
“ಕ್ರಾಂತಿಯೋಗಿ ಮಹಾದೇವರು’ ಪಾತ್ರವನ್ನು ರಾಮ್‌ಕುಮಾರ್ ನಿರ್ವಹಿಸುತ್ತಿದ್ದು, ಚಿತ್ರ ಕಳೆದ ವಾರ ಸದ್ದಿಲ್ಲದೆ ಶುರುವಾಗಿದೆ. ನಿರ್ಮಾಪಕ ಶ್ರೀಶೈಲ ಗಾಣಿಗೇರ ಅವರು ಬಂದು ಚಿತ್ರ ಮಾಡಿಕೊಡುವುದಕ್ಕೆ ಹೇಳಿದಾಗ, ಮತ್ತೂಂದು ಮಠದ ಚಿತ್ರವಿರಬಹುದು ಎಂದುಕೊಂಡರಂತೆ ಸಾಯಿಪ್ರಕಾಶ್. ಆ ನಂತರ ಇದೊಂದು ಐತಿಹಾಸಿಕ ಚಿತ್ರವಾಗಲಿದೆ ಎಂದನಿಸಿತಂತೆ. “ಇದೊಂದು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾ.
Related Articles
Advertisement
ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಬಂದ ರೀತಿ, ಮೈಲಿಗಟ್ಟಲೆ ಓಡಾಡಿ ಜನರನ್ನು ಅವರು ಸಂಘಟಿಸುತ್ತಿದ್ದ ರೀತಿ ಇವೆಲ್ಲಾ ಬಹಳ ಮುಖ್ಯ. ಇಂಥ¨ªೊಂದು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಇಂಥ¨ªೊಂದು ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಸಿಗಲಿ’ ಎಂದು ಹಾರೈಸಿದರು. ಛಾಯಾಗ್ರಾಹಕ ಜೆ.ಜಿ. ಕೃಷ್ಣ ಅವರಿಗೆ ಕಥೆ ಕೇಳಿ ಈ ಚಿತ್ರಕ್ಕೆ ಪ್ರಶಸ್ತಿ ಗಿಟ್ಟಿಸಿಕೊಳ್ಳಬಹುದು ಎಂದನಿಸಿತಂತೆ.
“ಇದು ಮಾಮೂಲಿ ಸಿನಿಮಾ ಅಲ್ಲ. ಬೇರೆ ತರಹದ ಛಾಯಾಗ್ರಹಣ, ಲೈಟಿಂಗ್ ಎಲ್ಲವರೂ ಬೇಕಿದೆ. ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. “ನನ್ನಾಸೆಯ ಹೂವೇ’ ಚಿತ್ರಕ್ಕೆ 20 ವರ್ಷಗಳ ಹಿಂದೆ ಪ್ರಶಸ್ತಿ ಬಂದಿತ್ತು. ಈ ಚಿತ್ರಕ್ಕೂ ಪ್ರಶಸ್ತಿ ಬರಲಿ ಎಂದು ಮಾಡ್ತಿದ್ದೀನಿ’ ಎಂದರು. ಹಿರಿಯ ನಟ ಶಿವಕುಮಾರ್, ಈ ಚಿತ್ರದಲ್ಲಿ ಮಹಾದೇವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಅವರು ಸಹ ಇದೊಂದು ಒಳ್ಳೆಯ ಚಿತ್ರವಾಗಲಿದೆ ಎಂದರು. “ಕ್ರಾಂತಿಯೋಗಿ ಮಹಾದೇವರು’ ಚಿತ್ರದಲ್ಲಿ ರಾಮ್‌ಕುಮಾರ್ ಮತ್ತು ಶಿವಕುಮಾರ್ ಜೊತೆಗೆ ರಮೇಶ್ ಭಟ್, ಸಿಹಿಕಹಿ ಚಂದ್ರು, ರವಿಚೇತನ್, ಸುಚಿತ್ರಾ, ಗಣೇಶ್ ರಾವ್ ಮುಂತಾದವರು ನಟಿಸುತ್ತಿದ್ದಾರೆ. ಮಾಧವಾನಂದ ಶೆಗುಣಸಿ ಚಿತ್ರಕ್ಕೆ ಕಥೆ ಬರೆದರೆ, ಬಿ. ಬಲರಾಂ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಶ್ರೀಶೈಲ ಗಾಣಿಗೇರ ಮತ್ತು ಯಲ್ಲಪ್ಪ ಮಹಿಷವಾಡಿಗಿ ಚಿತ್ರ ನಿರ್ಮಿಸುತ್ತಿದ್ದಾರೆ.