ಬಂಕುರಾ : ರೇಷನ್ ಕಾರ್ಡ್ ನಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆದಿದ್ದ ಕಾರಣ ನೊಂದ ವ್ಯಕ್ತಿಯೊಬ್ಬ ಸರಕಾರಿ ಅಧಿಕಾರಿಯ ಎದುರು ಬೌ..ಬೌ..ಬೌ..ಎಂದು ಬೊಗಳಿ ಆಕ್ರೋಶ ಹೊರ ಹಾಕಿದ ವಿಚಿತ್ರ ಘಟನೆ ನಡೆದಿದೆ.
ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದೆ. ಮೂರನೇ ಬಾರಿ ನನ್ನ ಹೆಸರನ್ನು ಶ್ರೀಕಾಂತಿ ದತ್ತಾ ಎಂದು ಬರೆಯುವ ಬದಲು ಶ್ರೀಕಾಂತಿ ಕುತ್ತಾ ಎಂದು ಬರೆಯಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ವಿಭಿನ್ನವಾಗಿ ಪ್ರತಿಭಟಿಸಿದ ಶ್ರೀಕಾಂತಿ ದತ್ತಾ ಮಾಧ್ಯಮಗಳ ಎದುರು ನೋವು ಹೊರ ಹಾಕಿದ್ದಾರೆ.
ನಾನು ಮತ್ತೆ ಮತ್ತೆ ಕರೆಕ್ಷನ್ ಗೆ ಅರ್ಜಿ ಹಾಕಲು ಹೋಗುತ್ತಿದ್ದೆ. ಅಲ್ಲಿ ಜಂಟಿ ಬಿಡಿಓ ಅವರನ್ನು ನೋಡಿ ಅವರ ಮುಂದೆ ನಾಯಿಯಂತೆ ವರ್ತಿಸತೊಡಗಿದೆ. ಅವರು ನನ್ನ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಓಡಿಹೋದರು. ನಮ್ಮಂತಹ ಸಾಮಾನ್ಯ ಜನರು ಎಷ್ಟು ಬಾರಿ ಕೆಲಸ ಬಿಟ್ಟು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಹೋಗಬೇಕು ಎಂದು ಶ್ರೀಕಾಂತಿ ದತ್ತಾ ಪ್ರಶ್ನಿಸಿದ್ದಾರೆ.