Advertisement

ಛತ್ತೀಸ್‌ಗಢ : ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ ವ್ಯಕ್ತಿಯ ಬಂಧನ

12:16 PM Oct 27, 2022 | Team Udayavani |

ರಾಯ್‌ಗಢ: ಛತ್ತೀಸ್‌ಗಢದ ಸಾರಂಗಢ-ಭಿಲೈಗಢ ಜಿಲ್ಲೆಯಲ್ಲಿ ಪಾಕಿಸ್ಥಾನದ ರಾಷ್ಟ್ರಧ್ವಜವನ್ನು ಮನೆಯ ಮೇಲೆ ಹಾರಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸರಿಯಾ ಪಟ್ಟಣದ ಅಟಲ್ ಚೌಕ್ ಪ್ರದೇಶದಲ್ಲಿನ ತನ್ನ ಮನೆಯ ಮೇಲೆ ಪಾಕಿಸ್ಥಾನದ ಧ್ವಜವನ್ನು ಹಾರಿಸಿದ್ದಾರೆ ಎಂಬ ದೂರನ್ನು ಸ್ವೀಕರಿಸಿದ ಪೊಲೀಸರಿಗೆ ಮಂಗಳವಾರ ಸಂಜೆ ಹಣ್ಣಿನ ಮಾರಾಟಗಾರ ಮುಸ್ತಾಕ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಪರಸ್ತ್ರೀಯೊಂದಿಗೆ ಸಿಕ್ಕಿ ಬಿದ್ದ ನಿರ್ಮಾಪಕ: ಕಾರಿಗೆ ಅಡ್ಡ ಬಂದ ಪತ್ನಿ; ಮುಂದಾಗಿದ್ದೇನು?

ಪೊಲೀಸರು ಧ್ವಜವನ್ನು ತೆಗೆದು ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ

ಖಾನ್ ವಿರುದ್ಧ ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆಯನ್ನು ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವ ಅಡಿಯಲ್ಲಿ( ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ) ಪ್ರಕರಣ ದಾಖಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಕೆಲವು ಸ್ಥಳೀಯ ಬಿಜೆಪಿ ಮುಖಂಡರು ಮಂಗಳವಾರ ಸರಿಯಾ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next