Advertisement

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

03:57 PM Mar 20, 2023 | Team Udayavani |

ಬೀಜಿಂಗ್: ಈಗಿನ ಕಾಲದಲ್ಲಿ ಯಾರು ಮೊಬೈಲ್‌ ದಾಸರಲ್ಲ ಹೇಳಿ. ಪ್ರತಿಯೊಬ್ಬರಿಗೂ ಮೊಬೈಲ್‌ ಬೇಕೇ ಬೇಕು. ಮೊಬೈಲ್‌ ಬಳಸುವುದಕ್ಕೆ ಯಾವುದೇ ಸಮಯವಿಲ್ಲ. ರಾತ್ರಿ ನಿದ್ದೆಯ ಹೊತ್ತಿಗೂ, ನಿದ್ದೆಯನ್ನು ಮರೆತೂ ಮೊಬೈಲ್‌ ಬಳಸುವುದುಂಟು. ಇಲ್ಲೊಬ್ಬ ತಂದೆ ತನ್ನ ಮಗ ಹೆಚ್ಚು ಮೊಬೈಲ್‌ ಬಳಸಿದ ಕಾರಣಕ್ಕೆ ಕಠಿಣ ಶಿಕ್ಷೆಯನ್ನು ನೀಡಿದ್ದಾರೆ.

Advertisement

ಚೀನಾದ ಶೆನ್ಜೆನ್ ಪ್ರದೇಶದ ಬಾಲಕನೊಬ್ಬ ನಡುರಾತ್ರಿ 1:30ರ ವೇಳೆ ವಿಡಿಯೋ ಗೇಮ್‌ ಆಡುತ್ತಿದ್ದ. ಮಗನ ಈ ವಿಡಿಯೋ ಗೇಮ್‌ ಆಟವನ್ನು ನೋಡಿದ ತಂದೆ ಹುವಾಂಗ್ ಸಿಟ್ಟಾಗಿ ಮಗನ ಮೇಲೆ ಗದರಿಸಿದ್ದಾನೆ. ಎಷ್ಟು ಸಲಿ ಹೇಳಿದರು ನಿದ್ರೆ ಮಾಡುವ ಹೊತ್ತಿನಲ್ಲಿ ಮೊಬೈಲ್‌ ಬಳಸಿದ ಮಗನ ಮೇಲೆ ಈ ಬಾರಿ ಸಿಟ್ಟು ಮಾಡಿಕೊಂಡು ಎರಡು ಮಾತು ಬೈಯುವ ಬದಲು ಅತ್ಯಂತ ಕಠಿಣ ಶಿಕ್ಷೆಯನ್ನು ಕೊಟ್ಟಿದ್ದಾರೆ.

ವಿಡಿಯೋ ಗೇಮ್‌ ಹೆಚ್ಚು ಆಡುತ್ತೀಯ ಅಲ್ವಾ ನೀನು ನಿದ್ದೆ ಮಾಡದೇ ವಿಡಿಯೋ ಗೇಮ್‌ ಆಡಬೇಕು. ಎಷ್ಟು ಬೇಕಾದರೂ ವಿಡಿಯೋ ಗೇಮ್‌ ಆಡು ಆದರೆ ನಿದ್ದೆಯನ್ನು ಮಾಡುವ ಆಗಿಲ್ಲ ಎಂದು ಮಗನಿಗೆ ಖಡಕ್‌ ಆಗಿ ಹೇಳಿ ವಿಡಿಯೋ ಗೇಮ್‌ ಆಡುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಲಂಡನ್ ಹೈ ಕಮಿಷನ್‌ನಲ್ಲಿ ಭಾರತದ ಧ್ವಜ ಇಳಿಸಿದ ಖಲಿಸ್ತಾನಿ ಪರ ಪ್ರತಿಭಟನಾಕಾರರು

ಮಗ ನಿದ್ದೆ ಬಂದರೂ ತಂದೆ ಆತನಿಗೆ ನಿದ್ದೆ ಮಾಡಲು ಬಿಡದೇ ವಿಡಿಯೋ ಗೇಮ್‌ ಆಡು ಎಂದು ಮಾಡಿದ ತಪ್ಪಿಗೆ ಇದು ಶಿಕ್ಷೆ ಎಂದು ಹೇಳುತ್ತಾರೆ. ನಿದ್ದೆಯಿಲ್ಲದೆ ತಲೆ ತಿರುಗಿ ವಾಂತಿ ಬರುವ ಹಾಗೆ ಆದರೂ ವಿಡಿಯೋ ಗೇಮ್‌ ಆಡುವುದನ್ನು ನಿಲ್ಲಸಬಾರದೆಂದು ತಂದೆ ಹೇಳಿದ್ದಾರೆ.

Advertisement

ಇಡೀ ಘಟನೆ ದೃಶ್ಯವನ್ನು ತಂದೆ ಚೀನಾದ ಟಿಕ್‌ ಟಾಕ್‌ ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಕೊನೆಗೆ ಮಗ ಅತ್ತು ಕ್ಷಮೆ ಕೇಳಿದ ಬಳಿಕ ಅಂದರೆ ಸತತ 17 ಗಂಟೆ ವಿಡಿಯೋ ಗೇಮ್‌ ಆಡುವ ಶಿಕ್ಷೆಯನ್ನು ಅನುಭವಿಸಿದ ಬಳಿಕ ತಂದೆ ಆತನನ್ನು ಮತ್ತೆ ತಪ್ಪು ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿಸಿಕೊಂಡು ಬಿಟ್ಟಿದ್ದಾರೆ.

ಇನ್ಮುಂದೆ ನಾನೆಂದೂ ವಿಡಿಯೋ ಗೇಮ್‌ ಆಡುವುದಿಲ್ಲ. 17 ಗಂಟೆ ವಿಡಿಯೋ ಗೇಮ್‌ ಆಡಿದೆ. ಸರಿಯಾದ ಸಮಯದಲ್ಲಿ ನಿದ್ರೆ ಮಾಡುತ್ತೇನೆ ಎಂದು ತಂದೆಯ ಬಳಿ ಮಗ ಕ್ಷಮೆ ಕೇಳಿದ್ದಾನೆ.

ಈ ಘಟನೆ ವೈರಲ್‌ ಆಗಿದ್ದು, ಯಾರೂ ಕೂಡ ತಮ್ಮ ಮನೆಯಲ್ಲಿ ಮಕ್ಕಳಿಗೆ ಈ ರೀತಿ ಮಾಡಬೇಡಿ. ಮಗನಿಗೆ ಬುದ್ದಿ ಬರಲಿ ಎಂದು ಈ ರೀತಿಯಾಗಿ ಮಾಡಿದೆ ಎಂದು ತಂದೆ ಹೇಳಿದ್ದಾರೆ.

ನೆಟ್ಟಿಗರು ಮಗನ ಮೇಲಿನ ತಂದೆಯ ವರ್ತನೆಗೆ ಕಿಡಿಕಾರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next