Advertisement

ಸೋಲಿನ ಆಘಾತ; ಪಾಕ್ ಕ್ರಿಕೆಟ್ ತಂಡವನ್ನೇ ನಿಷೇಧಿಸಿ; ಕೋರ್ಟ್ ಮೊರೆ ಹೋದ ಅಭಿಮಾನಿ!

11:56 AM Jun 21, 2019 | Team Udayavani |

ಲಾಹೋರ್: ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಹಣಾಹಣಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಸೋತ ಬಳಿಕ ಪಾಕ್ ಕ್ರಿಕೆಟ್ ಅಭಿಮಾನಿಗಳು ತೀವ್ರ ಟೀಕೆಯನ್ನು ಮುಂದುವರಿಸಿದ್ದು, ಏತನ್ಮಧ್ಯೆ ಪಾಕ್ ಅಭಿಮಾನಿಯೊಬ್ಬರು ಪಾಕ್ ಕ್ರಿಕೆಟ್ ತಂಡವನ್ನು ನಿಷೇಧಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ!

Advertisement

ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಿಷೇಧಿಸಿಬೇಕು ಮತ್ತು ಅದೇ ರೀತಿ ತಂಡವನ್ನು ಆಯ್ಕೆ ಮಾಡುವ ಸಮಿತಿಯನ್ನೂ ವಜಾಗೊಳಿಸಬೇಕೆಂದು ಕೋರಿ ಗುಜ್ರಾನ್ ವಾಲಾ ಸಿವಿಲ್ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಅರ್ಜಿದಾರರ ಹೆಸರನ್ನು ಬಹಿರಂಗಗೊಳಿಸಿಲ್ಲ. ದೂರಿನ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೆ ಹಾಜರಾಗುವಂತೆ ಗುಜ್ರಾನ್ ವಾಲಾ ಸಿವಿಲ್ ಕೋರ್ಟ್ ಜಡ್ಜ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಭಾನುವಾರ ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ವಿಶ್ವಕಪ್ ಹಣಾಹಣಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 89ರನ್ ಗಳ ಅಂತರದಿಂದ ಪರಾಜಯಗೊಂಡಿದ್ದು, ಇದರಿಂದ ಕೆರಳಿದ ಪಾಕ್ ಅಭಿಮಾನಿಗಳು ಪಾಕಿಸ್ತಾನಿ ಕ್ರಿಕೆಟಿಗರ ವಿರುದ್ಧ ಕಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಪಾಕ್ ಕ್ರಿಕೆಟ್ ನ ಮಾಜಿ ಕ್ರಿಕೆಟಿಗರೂ ಕೂಡಾ ವಾಗ್ದಾಳಿ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next