Advertisement

ಜೈಲು ವಸತಿ ಗೃಹದಲ್ಲಿ ಮರ ಬಿದ್ದು ಮಹಿಳಾ ಸಿಬ್ಬಂದಿ ಪತಿ ಸಾವು

09:54 AM Jun 03, 2020 | keerthan |

ಕಲಬುರಗಿ: ಎರಡು ದಿನಗಳಿಂದ ಸುರಿದ ಮಳೆಯಿಂದ ಮರ ಬಿದ್ದು ಡಿ-ಗ್ರೂಪ್ ಮಹಿಳಾ ಸಿಬ್ಬಂದಿಯ ಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗಿನ ಜಾವ ನಗರದ ‌ಕೇಂದ್ರ ಕಾರಾಗೃಹದ ಬಳಿ ಇರುವ ವಸತಿ ಗೃಹದಲ್ಲಿ ನಡೆದಿದೆ. ಗೋವಿಂದ ಚವ್ಹಾಣ (41) ಎಂಬುವವರೇ ಮೃತರು.

Advertisement

ಪತ್ನಿ ಪಾರಿಬಾಯಿ ಅವರಿಗೆ ನೀಡಲಾದ ವಸತಿ ಗೃಹದಲ್ಲಿ ಗೋವಿಂದ ಕುಟುಂಬ ಸಮೇತ ವಾಸವಾಗಿದ್ದರು. ಬೆಳಿಗ್ಗೆ 5.30ರ ಸುಮಾರಿಗೆ ಮನೆಯ ಹಿತ್ತಿಲಿಗೆ ಬಂದಾಗ ‌ಮಳೆಗೆ ಮರದ ಬೊಡ್ಡೆ ಶಿಥಿಲಗೊಂಡಿದ್ದರಿಂದ ಕೆಳಗೆ ಉರುಳಿ ಬಿದ್ದಿದೆ.‌ ಪರಿಣಾಮ ಗೋವಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಫರಹತಾಬಾದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.