Advertisement

Uppinangady ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

01:06 AM Mar 25, 2024 | Team Udayavani |

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ಮಾ. 24ರಂದು ಸಂಭವಿಸಿದೆ.

Advertisement

ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್‌ (35) ಮೃತ ವ್ಯಕ್ತಿ. ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಅವರು ಮುಳುಗಿದರು. ಆಗ ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಆಸುಪಾಸಿನ ಮಂದಿ ಧಾವಿಸಿ ಬಂದು ಹಗ್ಗದ ಸಹಾಯದಿಂದ ನದಿ ನೀರಿಗಿಳಿದು ಅವರನ್ನು ಮೇಲೆತ್ತಿ ತಂದು ಪ್ರಥಮ ಚಿಕಿತ್ಸೆಯ ಬಳಿಕ ಆ್ಯಂಬುಲೆನ್ಸ್‌ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next