Advertisement

ಮೊಲಕ್ಕೆ ಹೊಡೆದ ಗುಂಡು ತಗುಲಿ ವ್ಯಕ್ತಿ ಸಾವು

03:47 PM Jun 18, 2021 | Team Udayavani

ನಂಜನಗೂಡು: ಬಂದೂಕು ಉಪಯೋಗಿಸಿ ಮೊಲ ಬೇಟೆಯಾಡಲು ಹೋಗಿ ಮನುಷ್ಯನ ಹತ್ಯೆಗೆ ಕಾರಣನಾದ ಕೇರಳದ ನಿಷಾದ್‌ ಕೊನೆಗೂ ಪೊಲೀಸರ ಬಂಧಿಯಾಗಿದ್ದಾನೆ.

Advertisement

ತಾಲೂಕಿನ ಕಾರ್ಯ ಗ್ರಾಮದಲ್ಲಿ ಶುಂಟಿ ಬೆಳೆಯಲು ಕೇರಳದವರು 2 ವರ್ಷಗಳ ವರೆಗೆ ಜಮೀನನ್ನು ಗುತ್ತಿಗೆ ಪಡೆದಿದ್ದರಿ. ಈ ಜಮೀನಿನ ಕೆಲಸಗಾರನಾಗಿದ್ದ ಸುಲ್ತಾನ ಬತೇರಿ ತಾಲೂಕಿನ ಪಾಡಿಚೇರ್‌ ಗ್ರಾಮದ ಪ್ರಸನ್ನನ್‌ (58) ಗುಂಡು ತಗುಲಿ ಸಾವನ್ನಪ್ಪಿದ್ದಾನೆ.

ಮಂಗಳವಾರ ರಾತ್ರಿ ಪಕ್ಕದ ಜಮೀನಿಗೆ ತೆರಳುತ್ತಿದ್ದ ಪ್ರಸನ್ನನ್‌ಗೆ ಬಂದೂಕಿನಿಂದ ಹಾರಿಸಿದ ಗುಂಡು ತಾಗಿ ಆತ ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ. ಪಕ್ಕದ ಜಮೀನಿನ ಅದೇ ರಾಜ್ಯದ ನಿಷಾದ್‌ ಮೊಲದ ಬಲಿಗಾಗಿ ಹಾರಿಸಿದ ಗುಂಡು ಪ್ರಸನ್ನನ್‌ ಪ್ರಾಣ ತೆಗೆದಿದೆ. ಗುಂಡೇಟಿಗೆ ಮೊಲ ಬಲಿಯಾಗಿದೆ ಎಂದು ಸ್ಥಳಕ್ಕೆ ಧಾವಿಸಿದವನಿಗೆ ಪ್ರಸನ್ನನ್‌ ಹತ್ಯೆಯಾಗಿದ್ದು ಕಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದನು.

ಬುಧವಾರ ಸ್ಥಳಕ್ಕೆ ಧಾವಿಸಿದ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ಸ್ಥಳದ ಮಹಜರು ನಡೆಸಿದರು. ಕೊಲೆಗಾರನ ಪತ್ತೆಗಾಗಿ ಸುತ್ತಲಿನ ಶುಂಟಿ ಬೆಳೆದ ಜಾಗವನ್ನೆಲ್ಲ ಪರಿಶೀಲನೆ ನಡೆಸಿ, ವ್ಯಕ್ತಿಯನ್ನು ಹತ್ಯೆಗೈದ ನಿಷಾಧ್‌ನನ್ನು ಗುರುವಾರ ವಶಕ್ಕೆ ಪಡೆದು ಆತನ ವಿರುದ್ಧ ಹತ್ಯೆ ಐಪಿಸಿ 304 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಹತ್ಯೆ ಮಾಡಿ ಪರಾರಿಯಾಗಿ ದೂರದ ಕಡಬೂರಿನ ಜಮೀನಿನಲ್ಲಿ ಅಡಗಿ ಕುಳಿತ್ತಿದ್ದ ನಿಷಾದನನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಸನ್ನನ್‌ ಹತ್ಯೆಗೆ ಬಳಕೆಯಾದ ನಾಡ ಬಂದೂಕು ಹಾಗೂ ಅದರ ಗುಂಡು (ಚರೇ) ಗಳನ್ನೂ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ, ಹುಲ್ಲಹಳ್ಳಿ ಠಾಣಾಧಿಕಾರಿ ರಾಜೇಂದ್ರ ಕಠಾರಿಯಾ, ಸಿಬ್ಬಂದಿ ಗುರು, ಸತೀಶ್‌ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌ ಚೇತನ್‌ ಗುರುವಾರ ಹುಲ್ಲಹಳ್ಳಿ ಠಾಣೆಗೆ ಭೇಟಿ, ಪ್ರಕರಣ ಭೇದಿಸಿದ ಪೊಲೀಸರಿಗೆ ಶಹಬ್ಟಾಸ್‌ಗಿರಿ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next