Advertisement
ಸಾರ್ವಜನಿಕವಾಗಿ ಪೋಷಕರು ನಿಗದಿಪಡಿಸಿದ್ದ ವರನ ಜತೆಗೆ ವಿವಾಹವಾಗಲು ನಿರಾಕರಿಸಿ, ತಾನೊಬ್ಬನನ್ನು ಪ್ರೀತಿಸುತ್ತಿದ್ದು ಆತನನ್ನೇ ವಿವಾಹವಾಗುವುದಾಗಿ ಪುತ್ರಿ ಹೇಳಿದಾಗ ಸಿಟ್ಟಿಗೆದ್ದ ತಂದೆ ಪೊಲೀಸ್ ಅಧಿಕಅರಿಯ ಮುಂದೆ ಗುಂಡಿಟ್ಟು ಕೊಂ*ದಿರುವ ಆಘಾತಕಾರಿ ಘಟನೆ ನಡೆದಿದೆ.
Related Articles
Advertisement
“ನಾನು ವಿಕಿಯನ್ನು ವಿವಾಹವಾಗಲು ಬಯಸಿದ್ದು, ಅದಕ್ಕೆ ಪೋಷಕರು ಆರಂಭದಲ್ಲಿ ಒಪ್ಪಿದ್ದರು. ಆದರೆ ನಂತರ ನಿರಾಕರಿಸಿದ್ದರು. ಈ ವಿಚಾರದಲ್ಲಿ ಪ್ರತಿದಿನ ನನಗೆ ಹೊಡೆದು, ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಒಂದು ವೇಳೆ ನನಗೇನಾದರು ಆದರೆ ಅದಕ್ಕೆ ನನ್ನ ಕುಟುಂಬವೇ ಹೊಣೆಗಾರರು ಎಂದು ತನು ವಿಡಿಯೋದಲ್ಲಿ ತಿಳಿಸಿದ್ದಳು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್ ಅವರು ತನು ನಿವಾಸಕ್ಕೆ ಆಗಮಿಸಿ ಸಂಧಾನಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಹಿರಿಯರು ಪಂಚಾಯಿತಿ ನಡೆಸಲು ಆಗಮಿಸಿದ್ದರು. ಸಂಧಾನ ನಡೆಸುತ್ತಿದ್ದ ವೇಳೆ ಪುತ್ರಿ ತನು ಮನೆಯಲ್ಲಿ ವಾಸವಾಗಲು ನಿರಾಕರಿಸಿದ್ದು, ತನ್ನನ್ನು ಬೇರೆಡೆ ಕರೆದೊಯ್ಯುವಂತೆ ಪೊಲೀಸರಲ್ಲಿ ವಿನಂತಿಸಿಕೊಂಡಿದ್ದಳು. ಅಲ್ಲದೇ ಮದುವೆಗೆ ಸಿದ್ದಳಿಲ್ಲ ಎಂದು ತಿಳಿಸಿದ್ದಳು. ಆಗ ತಂದೆ ಮತ್ತು ಸಂಬಂಧಿ ರಾಹುಲ್ ಎಂಬಾತ ಏಕಾಏಕಿ ಗುಂಡಿನಿಂದ ಗುಂಡು ಹಾರಿಸಿದ್ದು, ತನು ಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾಳೆ.
ತಂದೆ ಪಿಸ್ತೂಲ್ ಅನ್ನು ಕೆಳಗಿಟ್ಟು ಪೊಲೀಸರಿಗೆ ಶರಣಾಗಿದ್ದು, ಸಂಬಂಧಿ ರಾಹುಲ್ ಪಿಸ್ತೂಲ್ ಜತೆ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 18ರಂದು ತನು ವಿವಾಹ ನಿಗದಿಯಾಗಿದ್ದು, ಇದೀಗ ಕೊ*ಲೆಯಲ್ಲಿ ಅಂತ್ಯಗೊಂಡಿದ್ದು, ವಿವಾಹದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.