ಅಮೇರಿಕ: ಒಂದು ಲೀಟರ್ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ, ಈಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸರದಿ ಹೆಚ್ಚಾಗ ತೊಡಗಿದೆ. ಅದೂ ಅಲ್ಲದೆ ದುನಿಯಾ ತುಂಬಾ ಕಾಸ್ಟ್ಲಿ ಆಗಿಬಿಟ್ಟಿದೆ ಇದರ ನಡುವೆ ಅಮೇರಿಕದ ವ್ಯಕ್ತಿಯೋರ್ವ ಹೊಸ ಮಾದರಿಯ ಬೈಕ್ ಅನ್ನು ಅನ್ವೇಷಣೆ ಮಾಡಿದ್ದಾನೆ ಆದರೆ ಅದಕ್ಕೆ ಚಲಿಸಲು ಪೆಟ್ರೋಲ್ ನಿಂದ ಚಲಿಸುವುದಿಲ್ಲ ಬದಲಾಗಿ ಬಿಯರ್ ಉಪಯೋಗಿಸಬೇಕಂತೆ.
ಸದಾ ಒಂದಲೊಂದು ರೀತಿಯ ಬೈಕ್ ಗಳನ್ನು ಅನ್ವೇಷಣೆ ಮಾಡುತ್ತಿರುವ ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿ ಇದೀಗ ಬಿಯರ್ ನಿಂದ ಚಲಿಸುವ ವಿಭಿನ್ನ ರೀತಿಯ ಬೈಕೊಂದನ್ನು ತಯಾರಿ ಮಾಡಿದ್ದಾನೆ. ಅಲ್ಲದೆ ಇದು ಗಂಟೆಗೆ 240 ಕಿಲೋ ಮೀಟರ್ ವೇಗದಲ್ಲಿ ಒಡಲಿದೆಯಂತೆ.
ಯಾವಾಗಲು ಪೆಟ್ರೋಲ್ ಚಾಲಿತ ಇಂಜಿನ್ ಅಳವಡಿಸುತಿದ್ದ ಮೈಕೆಲ್ಸನ್ ಈ ಬಾರಿ ಹೀಟಿಂಗ್ ಕಾಯಿಲ್ ನಿಂದ ಓಡುವ ಬೈಕನ್ನು ತಯಾರು ಮಾಡಿದ್ದಾನೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ ಎನ್ನುತ್ತಾರೆ.
ಅಷ್ಟು ಮಾತ್ರವಲ್ಲದೆ ಇದರ ವಿಡಿಯೋ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ, ಸದಾ ಒಂದಲ್ಲ ಒಂದು ರೀತಿಯ ಅನ್ವೇಷಣೆಗಳನ್ನು ಮಾಡುತ್ತಿರುವ ಮೈಕೆಲ್ಸನ್ ತಾನು ಇದುವರೆಗೂ ಮಾಡಿರುವ ಬೈಕ್ ಗಳಲ್ಲಿ ಇದು ವಿಭಿನ್ನವಾಗಿದೆ ಅಲ್ಲದೆ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕ್ ಇಲ್ಲಿನ ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದು, ಇನ್ನು ಇದರ ಸಾಮರ್ಥ್ಯ ಪರೀಕ್ಷೆ ಬಳಿಕ ರಸ್ತೆಗೆ ಇಳಿಸುವ ಇಂಗಿತವನ್ನು ಮೈಕೆಲ್ಸನ್ ವ್ಯಕ್ತಪಡಿಸಿದ್ದಾರೆ.