ದೆಹಲಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ನರೇಲಾ ಪ್ರದೇಶದಲ್ಲಿ ಮಂಗಳವಾರ(ಮೇ.16 ರಂದು) ನಡೆದಿರುವುದು ವರದಿಯಾಗಿದೆ.
ಕಾರಿಗೆ ಬೆಂಕಿ ಕಾಣಿಸಿಕೊಂಡು ಅದರಲ್ಲಿದ್ದ ವ್ಯಕ್ತಿ ಬಹುತೇಕ ಸುಟ್ಟ ಸ್ಥಿತಿಯಲ್ಲಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಾರಿನ ಮಾಲಕರನ್ನು ಪತ್ತೆ ಮಾಡಿದ್ದಾರೆ.
ದೆಹಲಿಯ ರೋಹಿಣಿ ನಿವಾಸಿಯಾಗಿರುವ ವ್ಯಕ್ತಿಯೊಬ್ಬರ ಕಾರು ಇದಾಗಿದ್ದು,ಈ ಬಗ್ಗೆ ವಿಚಾರಣೆ ನಡೆಸಿದಾಗ “ನನ್ನ ಸಹೋದರ ಅಜಯ್ ವಧ್ವಾನಿ ಈ ಕಾರನ್ನು ಕಳೆದ ಕೆಲ ದಿನಗಳಿಂದ ಬಳಸುತ್ತಿದ್ದರು. ಆತ ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡಿ ಅಪಾರ ಹಣ ಕಳೆದುಕೊಂಡಿದ್ದ. ನಮ್ಮ ಬಳಿ ಹಣ ಕೇಳುತ್ತಿದ್ದ ಇಲ್ಲದಿದ್ರೆ ಸಾಯೋದಾಗಿ ಹೇಳಿದ್ದ” ಪೊಲೀಸರಿಗೆ ಅಜಯ್ ಸಹೋದರ ಹೇಳಿದ್ದಾನೆ.
ಸದ್ಯ ಪೊಲೀಸರು ಪತ್ತೆಯಾದ ಮೃತದೇಹದ ಡಿಎನ್ ಎ ಪರೀಕ್ಷೆ ಮಾಡಿ, ಅದು ಅಜಯ್ ಅವರ ಮೃತದೇಹವೇ ಅಥವಾ ಬೇರೆ ಅವರದ್ದೇ ಎನ್ನುವುದನ್ನು ನೋಡಲಿದ್ದಾರೆ ಎಂದು ವರದಿ ತಿಳಿಸಿದೆ.
Related Articles