ಹೊಸದಿಲ್ಲಿ: ವೃದ್ಧನೋರ್ವ ವಿಭಿನ್ನವಾಗಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಗುರುವಾರ 62 ವರ್ಷಕ್ಕೆ ಕಾಲಿಟ್ಟಿರುವ ಜಾಸ್ಮರ್ ಸಿಂಗ್ ಸಂಧು ಎಂಬುವವರು 62.4 ಕಿ.ಮೀ. ಓಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 7 ಗಂಟೆ 32 ನಿಮಿಷಗಳಲ್ಲಿ ಈ ಸಾಧನೆ ಮಾಡಿದ್ದಾರೆ. ತಮ್ಮ ಓಟದ ದೃಶ್ಯಾವಳಿಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫಿಟೆ°ಸ್ ಟ್ರ್ಯಾಕರ್‌ನ ಸ್ಕ್ರೀನ್ ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. “ತಾನು 2010ರಲ್ಲಿ ಹೃದ್ರೋಗಿಯಾಗಿದ್ದೆ. ಬಳಿಕ ಓಟಗಾರು ಆಗುವ ಮೂಲಕ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಜಾಸ್ಮಿನ್ 62.4 ಕಿ.ಮೀ. ಓಡಿರುವ ದೃಶ್ಯ ವೈರಲ್ ಆಗಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ 5.17 ಲಕ್ಷ ಮಂದಿ ವೀಕ್ಷಿಸಿದ್ದಾರೆ. 38,400 ಲೈಕ್‌ಗಳು ಬಂದಿವೆ. ಇದರಿಂದ ಸ್ಫೂರ್ತಿಗೊಂಡಿರುವ ನೆಟ್ಟಿಗರು, ತಾವು ಕೂಡ ಹೀಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇವೆ. ಓಟದ ಮೂಲಕ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.