ಕಲಬುರಗಿ: ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳಿಯಲ್ಲಿ ನಿನ್ನೆ ರಾತ್ರಿ ಕೊಚ್ಚಿ ಹೋಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದು, ಅಂತ್ಯಕ್ರಿಯೆ ಮುಂಚೆಯೇ ಮೃತರ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ವಿತರಿಸಲಾಯಿತು.
ಸಿದ್ದು ಕೆರಮಗಿ (36 ) ಮಳೆ ಅನಾಹುತಕ್ಕೆ ಬಲಿಯಾದ ಯುವಕ. ಒಂದು ಕಿಲೋ ಮೀಟರ್ ನಷ್ಟು ದೂರದಲ್ಲಿ ಮುಳ್ಳು ಕಂಟಿಯಲ್ಲಿ ಸಿಲುಕಿರುವ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ್ದಿದ್ದು, ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದ ಟಂ ಟಂ ವಾಹನ ಸಿಕ್ಕಿಬಿದ್ದಿರುವುದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ಹೊರಟಿತ್ತು. ಆದರೆ ಜೋರಾದ ಮಳೆಗೆ ಹಳ್ಳ ತುಂಬಿತ್ತು. ಹೀಗಾಗಿ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ನೀರಲ್ಲಿ ಹರಿದು ಹೋಯಿತು. ಚಾಲಕ ಮಾತ್ರ ಕಂಟಿಯೊಂದನ್ನು ಹಿಡಿದು ಸ್ವಲ್ಪ ಸಮಯದ ನಂತರ ಹೊರ ಬಂದ. ಆದರೆ ಟ್ರ್ಯಾಕ್ಟರ್ ನಲ್ಲಿದ್ದ ಸಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿ:ಮದೆನಾಡು ಸೀಮೆಹುಲ್ಲು ಕಜೆ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ : ಆತಂಕದಲ್ಲಿ ಗ್ರಾಮಸ್ಥರು
ಪತ್ತೆಗಾಗಿ ರಾತ್ರಿಯಿಡಿ ಅಗ್ನಿ ಶಾಮಕ ದಳ ಹಾಗೂ ಇತರರು ಶೋಧ ನಡೆಸಿದರೂ ಸಿಗಲಿಲ್ಲ. ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ಪರಿಹಾರ ಚೆಕ್ ವಿತರಣೆ
ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಂಚೆಯೇ ಮೃತರ ಕುಟುಂಬಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ತದೇಶ ಕಲ್ಯಾಣ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಐದು ಲಕ್ಷ ರೂ ಪರಿಹಾರ ವಿತರಿಸಿದರು. ತಹಶೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಮುಂತಾದವರಿದ್ದರು. ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿತು