Advertisement

ಅತ್ಯಾಚಾರಗೈದು ಆ್ಯಸಿಡ್‌ ಎರಚಿ ಮಹಿಳೆ ಮೇಲೆ ದಾಳಿ; ಆರೋಪಿ ಅರೆಸ್ಟ್‌

09:44 AM May 18, 2019 | Sathish malya |

ಶಹಜಹಾನಪುರ, ಉತ್ತರ ಪ್ರದೇಶ : ಐದು ವರ್ಷಗಳ ತಮ್ಮ ಸಂಬಂಧವನ್ನು ತಾನು ಕೊನೆಗೊಳಿಸುತ್ತಿರುವುದಾಗಿ 45ರ ಹರೆಯದ ಮಹಿಳೆ ಹೇಳಿದ್ದಕ್ಕೆ ಕ್ರುದ್ಧನಾದ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿ ಆ್ಯಸಿಡ್‌ ಎರಚಿ ದಾಳಿ ಮಾಡಿದ ಅತ್ಯಮಾನುಷ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇಲ್ಲಿನ ಕಚ್ಚಿಯಾನ ಖೇರಾ ದಲ್ಲಿ ಈ ಘಟನೆ ನಿನ್ನೆ ಗುರುವಾರ ರಾತ್ರಿ ನಡೆದಿದೆ. ಆರೋಪಿಯು ಮಹಿಳೆಯನ್ನು ತೋಪಿಗೆ ಕರೆದಿದ್ದಾನೆ. ಅಲ್ಲಿಗೆ ಬಂದ ಆಕೆ ತಾನು ಈ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಇದರಿಂದ ಆತ ಕೋಪೋದ್ರಿಕ್ತನಾಗಿದ್ದಾನೆ. ಪರಿಣಾಮವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಆ್ಯಸಿಡ್‌ ಎರಚಿದ್ದಾನೆ ಎಂದು ಎಸ್‌ಪಿ, ಸುಭಾಷ್‌ ಚಂದ್ರ ಶಾಕ್ಯ ಹೇಳಿದರು.

ಮಹಿಳೆಯ ದೂರಿನ ಪ್ರಕಾರ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next