Advertisement

ಆಸ್ಟ್ರೇಲಿಯಾದಲ್ಲಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದಾತ 4 ವರ್ಷದ ಬಳಿಕ ದೆಹಲಿಯಲ್ಲಿ ಬಂಧನ

01:02 PM Nov 25, 2022 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ 2018ರಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಆರೋಪದಡಿ ಭಾರತೀಯ ನರ್ಸೊಬ್ಬರನ್ನು ಹೊಸದಿಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

38 ವರ್ಷದ ರಾಜವಿಂದರ್ ಸಿಂಗ್ ಅವರೇ ಬಂಧಿತ ವ್ಯಕ್ತಿ. 2018ರಲ್ಲಿ ಕ್ವೀನ್ಸ್ ಲ್ಯಾಂಡ್ ಬೀಚ್ ನಲ್ಲಿ 24 ವರ್ಷದ ಆಸ್ಟ್ರೇಲಿಯನ್ ಪ್ರಜೆ ತೊಯಾ ಕಾರ್ಡಿಂಗ್ಲೆ ಎಂಬವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾರೆ. ನಂತರ ಭಾರತಕ್ಕೆ ಪರಾರಿಯಾಗಿದ್ದರು.

ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಡಿಂಗ್ಲೆ ಕ್ವೀನ್ಸ್‌ಲ್ಯಾಂಡ್‌ ನ ವಾಂಗೆಟ್ಟಿ ಬೀಚ್‌ ನಲ್ಲಿ ತನ್ನ ನಾಯಿಯನ್ನು ವಾಕಿಂಗ್ ಮಾಡುತ್ತಿದ್ದಾಗ ಕೊಲ್ಲಲ್ಪಟ್ಟಿದ್ದಳು. ಎರಡು ದಿನಗಳ ನಂತರ ರಾಜವಿಂದರ್ ಸಿಂಗ್ ತನ್ನ ಕೆಲಸ, ಹೆಂಡತಿ ಮತ್ತು ಮೂವರು ಮಕ್ಕಳನ್ನು ಬಿಟ್ಟು ಆಸ್ಟ್ರೇಲಿಯಾದಿಂದ ಪರಾರಿಯಾಗಿದ್ದ.

ಆರೋಪಿ ಸಿಂಗ್ ಬಂಧನಕ್ಕೆ ಕಾರಣವಾದ ಮಾಹಿತಿಗಾಗಿ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ನೀಡಿದ್ದರು. ಇದು ಇಲಾಖೆಯಿಂದ ಇದುವರೆಗೆ ನೀಡಲ್ಪಟ್ಟ ಅತಿದೊಡ್ಡ ಮೊತ್ತವಾಗಿದೆ.

ಮಾರ್ಚ್ 2021 ರಲ್ಲಿ ಆಸ್ಟ್ರೇಲಿಯಾ ಸರ್ಕಾರವು ಸಿಂಗ್ ನನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಮನವಿ ಮಾಡಿತ್ತು. ಈ ವರ್ಷದ ನವೆಂಬರ್‌ನಲ್ಲಿ ವಿನಂತಿಯನ್ನು ಅನುಮೋದಿಸಲಾಗಿದೆ.

Advertisement

ಇದನ್ನೂ ಓದಿ:ಕುರುಗೋಡು: ಮಂಗನ ಕಡಿತಕ್ಕೆ ಗಂಭೀರ ಗಾಯಗೊಂಡ ಸಾರ್ವಜನಿಕರು, ವಿದ್ಯಾರ್ಥಿಗಳು

ಮೂಲತಃ ಪಂಜಾಬ್‌ನ ಬಟರ್ ಕಲಾನ್‌ ನ ರಾಜವಿಂದರ್ ಸಿಂಗ್ ಆಸ್ಟ್ರೇಲಿಯಾದ ಇನ್ನಿಸ್‌ ಫೈಲ್ ಟೌನ್‌ ನಲ್ಲಿ ವಾಸಿಸುತ್ತಿದ್ದ, ಅಲ್ಲಿ ಅವರು ನರ್ಸಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ.

2018ರ ಅಕ್ಟೋಬರ್ 21 ರಂದು ಕಾರ್ಡಿಂಗ್ಲೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಅದರ ಮರುದಿನ ಬೆಳಗ್ಗೆ ಆಕೆಯ ದೇಹವು ಕೇರ್ನ್ಸ್‌ ನ ಉತ್ತರದಲ್ಲಿರುವ ವಾಂಗೆಟ್ಟಿ ಬೀಚ್‌ ನಲ್ಲಿ ಪತ್ತೆಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next