Advertisement

Love jihad: ವಿವಾಹಿತ ಮಹಿಳೆ ಮೇಲೆ ದೌರ್ಜನ್ಯವೆಸಗಿ, ಮತಾಂತರ ಮಾಡಲು ಯತ್ನಿಸಿದಾತ ಅರೆಸ್ಟ್

09:15 AM May 24, 2023 | Team Udayavani |

ಲಕ್ನೋ: ವಿವಾಹಿತ ಮಹಿಳೆ ಮೇಲೆ ದೈಹಿಕ ದೌರ್ಜನ್ಯವೆಸಗಿ, ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿ ಹಾಗೂ ಆತನ ಸಹೋದರನನ್ನು ಸೇರಿ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಘಟನೆ ಹಿನ್ನೆಲೆ: ಕಳೆದ ಕೆಲ ಸಮಯದ ಹಿಂದೆ ಆರೋಪಿ ಆರೀಫ್‌ ಖಾನ್‌ ವಿವಾಹಿತ ಮಹಿಳೆಗೆ ಅಭಯ್‌ ಮಿಶ್ರಾ ಎಂದು ಪರಿಚಯಿಸಿ ಕರೆ ಮಾಡಿದ್ದಾನೆ. ಅಪರಿಚಿತ ವ್ಯಕ್ತಿಯನ್ನು ಪರಿಚಯಿಸಿಕೊಂಡ ಮಹಿಳೆ ಮತ್ತೊಂದು ದಿನ ಕೂಡ ಆತನೊಂದಿಗೆ ಮಾತನಾಡಿದ್ದಾರೆ. ದಿನಕಳೆದಂತೆ ಅಭಯ್‌ ಮಿಶ್ರಾ ವಿವಾಹಿತ ಮಹಿಳೆಯೊಂದಿಗೆ ಆತ್ಮೀಯವಾಗಿದ್ದಾರೆ. ಮಾ.24 ರಂದು ಮಹಿಳೆ ತನ್ನ ಸಂಬಂಧಿಕರ ಮನೆಯಿರುವ ಮಿರ್ಜಾಪುರಕ್ಕೆ ಬಂದಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಅಭಯ್‌ ಮಿಶ್ರಾವೆಂದು ಸುಳ್ಳು ಹೇಳಿಕೊಂಡಿದ್ದ ಆರೀಫ್‌ ಖಾನ್‌ ಮಹಿಳೆಯನ್ನು ಅಂಬಾಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಂಬಾಲದಲ್ಲಿ ಮಹಿಳೆಗೆ ಅಭಯ್‌ ಮಿಶ್ರಾನ ನಿಜವಾದ ಮುಖವಾಡ ಬಯಲಿಗೆ ಬಂದಿದೆ. ಆತ ಆರೀಫ್‌ ಖಾನ್‌ ಎನ್ನುವುದು ಗೊತ್ತಾಗಿದೆ.

ಇದನ್ನೂ ಓದಿ: Sarabhai vs Sarabhai ಖ್ಯಾತ ನಟಿ ವೈಭವಿ ಉಪಾಧ್ಯಾಯ ಕಾರು ಅಪಘಾತದಲ್ಲಿ ಮೃತ್ಯು

ಮಹಿಳೆ ಅಲ್ಲಿಂದ ಪರಾರಿ ಆಗಲು ಯತ್ನಿಸಿದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ 25 ದಿನಗಳ ಕಾಲ ಹಿಡಿದಿಟ್ಟುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಈ ಕೃತ್ಯವನ್ನು ಚಿತ್ರೀಕರಿಸಿ ವಿಡಿಯೋ ದೃಶ್ಯಾವಳಿಗಳನ್ನು ಬಳಸಿ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದಲ್ಲದೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾನೆ. ಬುರ್ಖಾ ಧರಿಸಿ, ನಮಾಜ್‌ ಮಾಡಲು ಆತ ಹೇಳುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಅಲ್ಲಿಂದ ಪರಾರಿ ಆದ ಬಳಿಕ ಮನೆಗೆ ಬಂದು ಗಂಡನ ಜೊತೆ ಹೋಗಿ ಸಂತ್ರಸ್ತ ಮಹಿಳೆ ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಇದೊಂದು ʼಲವ್  ಜಿಹಾದ್ʼ ಪ್ರಕರಣ: ಇದೊಂದು ಲವ್‌ ಜಿಹಾದ್‌ ಪ್ರಕರಣವಾಗಿದೆ. ಪೊಲೀಸರು ಈ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಂತೋಷ್ ಮಿಶ್ರಾ ಹೇಳಿದ್ದಾರೆ.

ಈ ಕೃತ್ಯಕ್ಕೆ ಸಾಥ್‌ ನೀಡಿದ ಆರೀಫ್‌ ಖಾನ್‌ ಸಹೋದರ ಇಮ್ರೋಜ್ ಖಾನ್ ಮತ್ತು ಸ್ನೇಹಿತ ಶಹಾಬುದ್ದೀನ್ ನ್ನು ಕೂಡ ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next